ಕಾರಿನ ಡೋರ್ ಓಪನ್ ಮಾಡಿ ನೇತಾಡಿಕೊಂಡು ಫೋಟೋಗೆ ಪೋಸ್ ನೀಡಿದ ಮಹಿಳೆ! - Mahanayaka
2:19 PM Thursday 12 - December 2024

ಕಾರಿನ ಡೋರ್ ಓಪನ್ ಮಾಡಿ ನೇತಾಡಿಕೊಂಡು ಫೋಟೋಗೆ ಪೋಸ್ ನೀಡಿದ ಮಹಿಳೆ!

moodigere
07/10/2024

ಮೂಡಿಗೆರೆ: ಚಲಿಸುತ್ತಿದ್ದ ಕಾರಿನ ಡೋರ್ ಓಪನ್ ಮಾಡಿಕೊಂಡು ಕಾರಿನಲ್ಲಿ ನಿಂತುಕೊಂಡು ಮಹಿಳೆಯೊಬ್ಬರು ಫೋಟೋಗೆ ಫೋಸ್ ಕೊಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆಲ್ದೂರು ಬಳಿ ನಡೆದಿದೆ.

ಬೆಂಗಳೂರು ನೋಂದಣಿ ಹೊಂದಿರುವ ಕಾರು ಆಲ್ದೂರಿನಿಂದ ಹಾಂದಿ ಮಾರ್ಗವಾಗಿ ಮೂಡಿಗೆರೆಗೆ ತೆರಳುತ್ತಿತ್ತು. ಈ ವೇಳೆ ಮಹಿಳೆ ಕಾರಿನ ಡೋರ್ ಓಪನ್ ಮಾಡಿಕೊಂಡು, ಕಾರಿನ ಡೋರ್ ತೆಗೆದುಕೊಂಡು ಕ್ಯಾಮರಾಕ್ಕೆ ವಿಡಿಯೋ ತಗೆಯಲು ಫೋಸ್ ಕೊಟ್ಟಿದ್ದಾರೆ.

ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ರಸ್ತೆ ಮಧ್ಯೆ ಮಹಿಳೆಯ ಹುಚ್ಚಾಟ ಕಂಡು ಸ್ಥಳೀಯರು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಪ್ರವಾಸಕ್ಕೆ ಬಂದ ಕೆಲ ಪ್ರವಾಸಿಗರು ಈ ರೀತಿ ಹುಚ್ಚಾಟ ಮಾಡಿ ರಸ್ತೆ ಮಧ್ಯೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಅಸಮಾಧಾನ ಹೊರ ಹಾಕಿರುವ ಸ್ಥಳೀಯರು ಕಾರು ಹಾಗೂ ಆ ಮಹಿಳೆ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ