ವಿರೋಧ ಪಕ್ಷದವರಿಗೆ ಸೋಲಿನ ಆತಂಕ ಕಾಡುತ್ತಿದೆ: ನಳಿನ್ ಕುಮಾರ್ ಕಟೀಲ್ - Mahanayaka

ವಿರೋಧ ಪಕ್ಷದವರಿಗೆ ಸೋಲಿನ ಆತಂಕ ಕಾಡುತ್ತಿದೆ: ನಳಿನ್ ಕುಮಾರ್ ಕಟೀಲ್

nalin kumar kateel
13/03/2023

ಬಿಜಾಪುರ: ರಾಜ್ಯದಲ್ಲಿ ಬಿಜೆಪಿಯಿಂದ ಪ್ರಾರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ಭಾಗಗಳಲ್ಲಿ ಜನರು ಸ್ವಯಂಸ್ಪೂರ್ತಿಯಿಂದ ಸೇರುತ್ತಿರುವುದನ್ನು ನೋಡಿದರೆ ಈ ಯಾತ್ರೆ ಜನಮಾನಸದಲ್ಲಿ ಸದಾ ಉಳಿಯಲಿದೆ ಎಂಬುದು ಖಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಹೇಳಿದರು.


Provided by

ಬಸವನಬಾಗೇವಾಡಿ ಕ್ಷೇತ್ರದ ಆಲಮಟ್ಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಬಿಜೆಪಿ ಸಾಧನೆಗಳನ್ನು ಕಂಡು ಪ್ರತಿಯೊಂದು ಯಾತ್ರೆಯಲ್ಲಿ ಅಭೂತಪೂರ್ವ ಜನರು ಸೇರುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಿಕ್ಕೆ ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ಸೋಲಿನ ಆತಂಕ ಕಾಡುತ್ತಿದೆ ಎಂದು ನುಡಿದರು.

ಸಾಧನೆಯ ಕಾರ್ಡ್ ಗೆಲುವಿಗೆ ಆಧಾರ: ಸಿ.ಟಿ.ರವಿ


Provided by

ಕಾಂಗ್ರೆಸ್ ತನ್ನ ಅಧಿಕಾರವಿರುವ ರಾಜ್ಯದಲ್ಲಿ ಹಾಗೂ ಹಿಂದೆ ಅಧಿಕಾರದಲ್ಲಿ ಇದ್ದಾಗ ಏನನ್ನೂ ಮಾಡದೆ ಇಂದು ಜನಸಾಮಾನ್ಯರಿಗೆ ಗ್ಯಾರಂಟಿ ಕಾರ್ಡ್ ಎಂಬ ಹೆಸರಿನಲ್ಲಿ ಸುಳ್ಳು ಪತ್ರ ಹಂಚುತ್ತಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಕ್ಷೇಪಿಸಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಇರಲಾರದ ವಿದ್ಯಾಸಿರಿ, ಕಿಸಾನ ಸಮ್ಮಾನದಂತ ಅನೇಕ ಯೋಜನೆ ಜಾರಿಗೆ ತಂದಿದೆ. ಜಿಲ್ಲೆಯಲ್ಲಿ 196 ಕೋಟಿ ರೂ ರೈಲ್ವೆ ಬ್ರಿಡ್ಜ್ ನಿರ್ಮಾಣ, ಡಬಲಿಂಗ್ ಕಾರ್ಯ, ಜಿಲ್ಲೆಯ ನೀರಾವರಿ ಯೋಜನೆಗೆ ನೀಡಿದ ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳ ಸಾಧನೆಯ ಕಾರ್ಡ್ ಮುಂದಿಟ್ಟು ಮತದಾರರಲ್ಲಿ ಮತಯಾಚನೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳ ಗ್ಯಾರಂಟಿ ನಾವು ಕೊಡುವುದಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ನವರ ಬಾಯಲ್ಲಿ  ಆಡುವ ಮಾತಿನ ವಿರುದ್ದ ಎಲ್ಲವೂ ಆಗುತ್ತದೆ. ಮೋದಿಯವರು ನಮ್ಮಪ್ಪನಾನಣೆಗೂ ಪ್ರಧಾನಿ ಆಗಲ್ಲ ಅಂದಿದ್ದರು, ಎಸ್ಸಿ.ಎಸ್ಟಿ ಮೀಸಲಾತಿ ಹೆಚ್ಚಿಸಲು ಸಾಧ್ಯವೇ ಇಲ್ಲ ಎಂದಿದ್ದರು, ಯಡಿಯುರಪ್ಪನವರ ಮುಖ್ಯಮಂತ್ರಿಯಾಗಲ್ಲ, ನಾನೇ ಮತ್ತೆ ಮುಂದಿನ ಮುಖ್ಯಮಂತ್ರಿ ಅಂತ ಹೇಳಿದ್ದ ಸಿದ್ದರಾಮಯ್ಯನವರ ಮಾತುಗಳು ಹುಸಿಯಾಗಿವೆ, ಅವರ ಮಾತಿಗೆ ಯಾವುದೇ ಬೆಲೆ ಇಲ್ಲ. ನಾವು ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆಲುವುದು ನಿಶ್ಚಿತ. ಬಿಜೆಪಿ ಕಿಚನ್ ಕೋಣೆಯಲ್ಲಿ ಟಿಕೆಟ್ ಘೋಷಣೆ ಮಾಡುವ ಪಕ್ಷವಲ್ಲ. ಡಿಎನ್‍ಎ ಆಧಾರದ ಮೇಲೆ ಸ್ಥಾನಮಾನ ಕೊಡುವುÀದಿಲ್ಲ. ಯಾರಿಗೆ ಟಿಕೆಟ್ ನೀಡಿದರೂ ಅದು ಸಂಸದೀಯ ಮಂಡಳಿಯಲ್ಲಿ ನಿರ್ಣಯಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ, ಶಾಸಕ ಮಾಲಿಕಯ್ಯ ಗುತ್ತೆದಾರ, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಯಾತ್ರಾ ಸಂಚಾಲಕ ಅರುಣ ಶಾಹಾಪೂರ ಇದ್ದರು. ಬಳಿಕ ವಿವಿಧೆಡೆ ನಡೆದ ರೋಡ್ ಷೋದಲ್ಲಿ ಮುಖಂಡರು, ಸಹಸ್ರಾರು ಜನ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ