ಸಣ್ಣ ಜಾತಿಗಳ ಅಭಿವೃದ್ಧಿ ಸಹಿಸದರಿಂದ ಜಾತಿ ಗಣತಿಗೆ ವಿರೋಧ: ಶಾಸಕ ಪುಟ್ಟರಂಗಶೆಟ್ಟಿ - Mahanayaka
11:56 PM Thursday 12 - December 2024

ಸಣ್ಣ ಜಾತಿಗಳ ಅಭಿವೃದ್ಧಿ ಸಹಿಸದರಿಂದ ಜಾತಿ ಗಣತಿಗೆ ವಿರೋಧ: ಶಾಸಕ ಪುಟ್ಟರಂಗಶೆಟ್ಟಿ

puttaranga shetty
29/11/2023

ಚಾಮರಾಜನಗರ: ಸಣ್ಣ ಕೋಮುಗಳು ಮುಂದೆ ಬರಬಾರದೆನ್ನುವರು ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ‌.ಪುಟ್ಟರಂಗಶೆಟ್ಟಿ ಹೇಳಿದರು.

ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ಸಮೀಕ್ಷೆಗೆ 160 ಕೋಟಿ ಖರ್ಚಾಗಿದೆ, ಹಲವು ವರ್ಷದಿಂದ ಈ ಎಲ್ಲಾ ಕಾರ್ಯ ಆಗಿದೆ, ಈಗ ವರದಿಯೇ ಬೇಡ ಎಂದರೆ ಹೇಗೆ..? ಎಂದು ಶಾಸಕ ಅಸಮಾಧಾನ ಹೊರಹಾಕಿದರು.

ಮುಂದುವರೆದವರು ಮುಂದುವರಿಯುತ್ತಲೇ ಇರಬೇಕು ಎಂಬ ಸಂಕುಚಿತ ಮನಸ್ಸು ಬಿಟ್ಟು ವಿಶಾಲ ದೃಷ್ಟಿಗೆ ಬನ್ನಿ, ವರದಿ ಸ್ವೀಕಾರವಾದ ನಂತರ ಅದರ ಸರಿ-ತಪ್ಪು ಪರಿಶೀಲಿಸಿ, ಸ್ವೀಕಾರಕ್ಕೂ ಮುನ್ನವೇ ವರದಿ ಸರಿಯಲ್ಲ ಎಂದರೇ ಹೇಗೆ ಎಂದು ಕಿಡಿಕಾರಿದರು.

ನಾನು ಹಿಂದುಳಿದ ಕಲ್ಯಾಣ ಸಚಿವನಾಗಿದ್ದ ವೇಳೆ ವರದಿ ಸ್ವೀಕಾರ ಮಾಡಲು ಮುಂದಾಗಿ ಎಂದರೆ ಕುಮಾರಸ್ವಾಮಿ ಮಾಡಲಿಲ್ಲ, ಅದಾದ ಬಳಿಕ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೂಡ ಮಾಡಲಿಲ್ಲ ಈಗ ಸಿದ್ದರಾಮಯ್ಯ ಮಾಡ್ತಿದ್ದಾರೆ, ಸಣ್ಣ ಸಮಾಜಕ್ಕೆ ಯಾರೂ ದ್ರೋಹ ಮಾಡಬಾರದು ಎಂದರು.

ನಾನು ಸಚಿವನಾಗಿದ್ದ ವೇಳೆ ಕೋಟಾ ಶ್ರೀನಿವಾಸ ಪೂಜಾರಿ ಸೇರಿ ಹಲವರು  ಸಮೀಕ್ಷೆ ವರದಿ ಸ್ವೀಕರಿಸಿ, ಬಹಿರಂಗಗೊಳಿಸಿ ಎಂದು ಸದನದಲ್ಲಿ ಗಲಾಟೆ ಮಾಡಿದ್ದರು, ಈಗ ಅವರೆಲ್ಲಾ ಎಲ್ಲಿ..? ಎಂದು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ