ಪಡುಬಿದ್ರೆ ಪಡುಹಿತ್ಲು ಶ್ರೀಜಾರಂದಾಯ ದೈವಸ್ಥಾನ, ಭಂಡಾರ ಕೋಣೆಯ ಎಲ್ಲಾ ಕೀಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲು ಆದೇಶ: ಪ್ರಕಾಶ್ ಶೆಟ್ಟಿ
ಉಡುಪಿ: ಪಡುಬಿದ್ರೆ ಪಡುಹಿತ್ಲು ಶ್ರೀಜಾರಂದಾಯ ದೈವಸ್ಥಾನದ ಹಾಗೂ ಭಂಡಾರ ಕೋಣೆಯ ಎಲ್ಲಾ ಕೀಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಉಡುಪಿ ಮುಖ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ ಎಂದು ಪಡುಹಿತ್ಲು ಶ್ರೀಜಾರಂದಾಯ ದೈವಸ್ಥಾನ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಜ.7ರಂದು ಬ್ರಾಹ್ಮಣ, ಮೊಗವೀರ, ಬಂಟ, ಬಿಲ್ಲವ ಹಾಗೂ ಇತರ ಸಮಾಜದವರು ದೈವಸ್ಥಾನಕ್ಕೆ ಬಂದಾಗ ಸಾನದ ಮನೆಯವರು ಮುಖ್ಯದ್ವಾರಕ್ಕೆ ಬೀಗ ಹಾಕಿ ಭಕ್ತರ ಪ್ರವೇಶಕ್ಕೆ ತಡೆ ಒಡ್ಡಿದ್ದರು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಲಾಗಿತ್ತು. ಇದೀಗ ಬಂದಿರುವ ಕೋರ್ಟ್ ಆದೇಶವು ದೈವದ ಇಚ್ಛೆ ಮತ್ತು ಭಕ್ತರ ಮನಸ್ಸಿನ ಅಪೇಕ್ಷೆಯಾಗಿದೆ ಎಂದರು.
ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಸಾನದ ಮನೆಯವರು ಜಯಾಕ್ಷ ಕೆ.ಸುವರ್ಣ ಮತ್ತು ಇತರರು ಕಾನೂನನ್ನು ಕೈ ಎತ್ತಿಕೊಂಡು ಪರಿಸ್ಥಿತಿಯನ್ನು ದುರ್ಲೋಪಪಡಿಸಿಕೊಂಡು ದೈವಸ್ಥಾನದ ಹೆಸರು ಮತ್ತು ಆಸ್ತಿಯನ್ನು ದುರುಪಯೋಗಪಡಿಸಿದ್ದಕ್ಕೆ ನಾವು ಕೋರ್ಟ್ ರಿಸೀವರನ್ನು ದೈವಸ್ಥಾನದ ಆಡಳಿತವನ್ನು ನಡೆಸುವುದಕ್ಕಾಗಿ ಕೇಳಿಕೊಂಡಂತೆ, ನ್ಯಾಯಲಯವು ಎ.20ರಂದು ಆದೇಶ ನೀಡಿದೆ. ಅದರಂತೆ ಉಡುಪಿಯ ಹಿರಿಯ ನ್ಯಾಯವಾದಿಯನ್ನು ಕೋರ್ಟು ರಿಸೀವರಾಗಿ ನೇಮಕ ಮಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ನಗ ನಾಣ್ಯಗಳನ್ನು ದೈವದ ಆಭರಣಗಳನ್ನು, ಬಾಲ್ ಭಂಡಾರವನ್ನು ಮತ್ತು ಭದ್ರತೆಯ ಕೊಠಡಿಯ 3 ಜೊತೆ ಕೀಗಳನ್ನು ಕೋರ್ಟು ಸ್ವಾಧೀನ ತೆಗೆದುಕೊಂಡು, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇಟ್ಟು ದೈವಸ್ಥಾನಕ್ಕೆ ಸಂಬಂಧಪಟ್ಟ ಸಂಪೂರ್ಣ ಆಡಳಿತವನ್ನು ಕೋರ್ಟು ರಿಸೀವರ್ ನ್ಯಾಯಾಲಯದ ಅದೇಶದ ಮೇರೆಗೆ ನ್ಯಾಯಾಲಯದ ಸುಪರ್ದಿಯಲ್ಲಿ ಇಟ್ಟುಕೊಳ್ಳಬೇಕೆಂದು ಆದೇಶ ಮಾಡಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಪಡುಹಿತ್ಲು ಶ್ರೀಜಾರಂದಾಯ ದೈವಸ್ಥಾನ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ.
ಆ ಕಾರಣಕ್ಕಾಗಿ ಈ ಆದೇಶದ ಪ್ರಕಾರ ಇನ್ನು ಮುಂದೆ ದೈವಸ್ಥಾನದ ಎಲ್ಲಾ ಆಗು ಹೋಗುಗಳನ್ನು ನ್ಯಾಯಾಲಯದ ನಿಯೋಜಕರು ಮಾಡುವಂತ ವ್ಯವಸ್ಥೆಯನ್ನು ನ್ಯಾಯಾಲಯ ಮಾಡಿರುತ್ತದೆ. ಆದ್ದರಿಂದ ಯಾರಿಗೂ ಸಹ ಯಾವುದೇ ರೀತಿಯ ದುರ್ಲೋಪಪಡಿಸುವ ಅವಕಾಶ ಇರುವುದಿಲ್ಲ ಹಾಗೂ ಭಕ್ತರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಅವರು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಜಗದೀಶ್ ರಾವ್, ಜೊತೆ ಕಾರ್ಯದರ್ಶಿ ಹರೀಶ್ ಪುತ್ರನ್, ಟ್ರಸ್ಟಿ ಮೋಹನ್ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw