ಆಸ್ಕರ್ ಫೆರ್ನಾಂಡಿಸ್ ಅಂತಿಮ ದರ್ಶನ ಪಡೆದ ಕರಾವಳಿಯ ನಾಯಕರು
ಉಡುಪಿ: ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ ಶೋಕಮಾತಾ ಚರ್ಚ್ ಗೆ ತರಲಾಯಿತು. ಈ ವೇಳೆ ಕರಾವಳಿಯ ವಿವಿಧ ಪಕ್ಷಗಳ ನಾಯಕರು ಚರ್ಚ್ ಗೆ ಆಗಮಿಸಿದ್ದಾರೆ.
ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಯು.ಟಿ.ಖಾದರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ, ಶಾಸಕ ಯು.ಟಿ.ಖಾದರ್, ಮುಖಂಡರಾದ ಮೊಯ್ದಿನ್ ಬಾವ, ಜೆ.ಆರ್.ಲೋಬೋ, ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಚರ್ಚೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಉಡುಪಿ ಧರ್ಮಪ್ರಾಂತ್ಯದ ಗುರುಗಳಾದ ಜೆರಾಲ್ಡ್ ಐಸಾಕ್ ಲೋಬೋ, ಧಾರ್ಮಿಕ ವಿಧವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಪಾರ್ಥಿವ ಶರೀರವನ್ನು ಬ್ರಹ್ಮಗಿರಿಯ ಆಸ್ಕರ್ ಅವರ ನಿವಾಸಕ್ಕೆ ತಂದು ಸಾರ್ವಜನಿಕ ದರ್ಶನಕ್ಕಿಡಲಾಯಿತು. ಧರ್ಮಗುರುಗಳ ಪ್ರಾರ್ಥನೆಯ ನಂತರ, ಕಾಂಗ್ರೆಸ್ ಕಚೇರಿಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಹೂವಿನ ಮಳೆಗರೆಯುವ ಮೂಲಕ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಇನ್ನಷ್ಟು ಸುದ್ದಿಗಳು…
ಶಾಕಿಂಗ್ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ಯುವತಿಯ ಖಾಸಗಿ ಅಂಗ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ!
ಕುಂಭಮೇಳಕ್ಕೆ ಬಂದಿದ್ದ ಯುವತಿಯನ್ನು ಅತ್ಯಾಚಾರ ನಡೆಸಿ, ಚಿಕ್ಕಪ್ಪನಿಂದಲೇ ಬ್ಯ್ಲಾಕ್ ಮೇಲ್ !
ಹೃದಯ ವಿದ್ರಾವಕ ಘಟನೆ: ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳ ಮೇಲೆಯೇ ಉರುಳಿ ಬಿತ್ತು ಕಟ್ಟಡ!
ಶಾಕಿಂಗ್ ನ್ಯೂಸ್: ಹಫ್ತಾ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯ ಮೇಲೆ ರೌಡಿಗಳಿಂದ ಗ್ಯಾಂಗ್ ರೇಪ್
ಶಾಲೆಯ ಪ್ರಯೋಗಾಲಯದಲ್ಲಿದ್ದ ಆ್ಯಸಿಡ್ ಬಾಟಲಿ ಒಡೆದು ನಾಲ್ವರು ವಿದ್ಯಾರ್ಥಿನಿಯರಿಗೆ ಗಾಯ!
ಜಾತಿ ಜನಗಣತಿ ಸಮೀಕ್ಷೆಯನ್ನು ಕೊಂದದ್ದು ಸಿದ್ದರಾಮಯ್ಯ, ಹೂತದ್ದು ಡಿ.ಕೆ.ಶಿವಕುಮಾರ್ | ಕೆ.ಎಸ್.ಈಶ್ವರಪ್ಪ
ಪ್ರಾಣ ಸ್ನೇಹಿತರು ಜೊತೆಯಾಗಿ ಪ್ರಾಣ ಬಿಟ್ಟರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು ಪ್ರಾಣಕ್ಕೆ ಕುತ್ತು ತಂದಿತು!