ಆಸ್ಕರ್ ಫರ್ನಾಂಡಿಸ್ ಆರೋಗ್ಯ ಸ್ಥಿತಿ ನೆನೆದು ಗಳಗಳನೇ ಅತ್ತ ಜನಾರ್ದನ ಪೂಜಾರಿ

janardana poojary
21/07/2021

ಮಂಗಳೂರು:  ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರು ಯೋಗ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಕರ್ ಫರ್ನಾಂಡಿಸ್ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಜನಾರ್ದನ ಪೂಜಾರಿ ಅವರು ಇಂದು ಆರೋಗ್ಯ ವಿಚಾರಿಸಲು ಬಂದಿದ್ದು,  ಫರ್ನಾಂಡಿಸ್ ಅವರ ಆರೋಗ್ಯ ಸ್ಥಿತಿಯನ್ನು ನೆನೆದು ಮಾಧ್ಯಮಗಳ ಮುಂದೆ ಗಳಗಳನೇ ಅತ್ತಿದ್ದಾರೆ.

ಅವರಿಗೆ ಖಂಡಿತವಾಗಿಯೂ ಏನೂ ಆಗುವುದಿಲ್ಲ. ದೇವರು ಅವರನ್ನು ಬದುಕಿಸುತ್ತಾರೆ. ಅವರು ಖಂಡಿತಾ ಬದುಕುತ್ತಾರೆ ಎಂದು ಜನಾರ್ದನ ಪೂಜಾರಿ ಭಾವುಕರಾದರು. ಆಸ್ಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ತಮ್ಮ ಇಳಿ ವಯಸ್ಸಿನಲ್ಲಿಯೂ ಜನಾರ್ದನ ಪೂಜಾರಿ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ವಿಶಾಲ ಗಾಣಿಗ ಹತ್ಯೆಗೆ ಸ್ಫೋಟಕ ತಿರುವು: ಸುಪಾರಿ ಕಿಲ್ಲರ್ಸ್ ನ್ನು ಬಿಟ್ಟು ಪತ್ನಿಯನ್ನೇ ಕೊಂದ ಪತಿ

ಆಂಬುಲೆನ್ಸ್ ಮುಂದೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಆರೋಪಿ ಪೊಲೀಸ್ ವಶಕ್ಕೆ

“ನಾನು ಕೂಡ ಬ್ರಾಹ್ಮಣ” | ಆಟದ ಮೈದಾನಕ್ಕೆ ಜಾತಿಯನ್ನು ಎಳೆದು ತಂದ ಸುರೇಶ್ ರೈನಾ

ಭರ್ಜರಿ ಅನುದಾನ ಘೋಷಿಸಿದ ಸಿಎಂ ಯಡಿಯೂರಪ್ಪ | ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು?

ಇತ್ತೀಚಿನ ಸುದ್ದಿ

Exit mobile version