ಜಾತಿಭೇದ ಮರೆತು ಸೇವೆ ಮಾಡಿದ ಪಕ್ಷ ನಮ್ಮದು: ಎಸ್ ಡಿಪಿಐ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ
ಮೂಡುಬಿದ್ರೆ: ಎಸ್.ಡಿ.ಪಿ.ಐ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ವತಿಯಿಂದ ಮೂಡಬಿದ್ರೆಯಲ್ಲಿ ಪಕ್ಷದ ನೂತನ ಕಛೇರಿ ಹಾಗೂ ಸಾರ್ವಜನಿಕ ಸಮಾವೇಶವು ಜರುಗಿತು.
ಕಛೇರಿ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ, ಕೊರೊನಾ ಬಂದಾಗ ಜಾತಿಭೇದ ಮರೆತು ಸೇವೆ ಮಾಡಿದ ಪಕ್ಷ ನಮ್ಮದು, ನಮ್ಮ ಪಕ್ಷದಲ್ಲಿ ಜಾತಿ ಭೇದವಿಲ್ಲ, ನಾವೆಲ್ಲಾ ಸೇರಿಕೊಂಡು ಮೂಡಬಿದ್ರೆಯಲ್ಲಿ ಸೌಹಾರ್ಧತೆ ಬೆಳೆಸೋಣ, ಅಭಿವ್ರಧ್ಧಿಯಲ್ಲಿ ಜೊತೆಯಾಗಿ ಮುನ್ನಡೆಯೋಣ, ಜಾತಿಭೇದ ಮರೆತು ನನ್ನನ್ನು ಬೆಂಬಲಿಸಿ ಎಂದರು.
ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡುತ್ತಾ, SDPI ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಾಗಲೇ ರಾಜಕೀಯ ಪಕ್ಷಗಳಿಗೆ ನಡುಕ ಉಂಟುಮಾಡಿದೆ. ಬಿಜೆಪಿಯನ್ನು ನೈಜವಾಗಿ ಎದುರಿಸುವ ಶಕ್ತಿ ಕಾಂಗ್ರೆಸ್ ಗೆ ಇದೆಯೇ? ಪ್ರತಿ ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷವು ಬಿಜೆಪಿ ಬರುತ್ತೆ ನಾವು ಜಾತ್ಯಾತೀತರು ನಮ್ಮನ್ನು ಬೆಂಬಲಿಸಿ ಎಂದು ಗೋಗರೆಯುವ ಕಾಂಗ್ರೆಸ್ ಬಿಜೆಪಿಯನ್ನು ತೋರಿಸಿ ಮತ ಪಡೆಯುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಜಾತ್ಯಾತೀತ ಪಕ್ಷದ ಹೆಸರಲ್ಲಿ ಅಧಿಕಾರವನ್ನು ಪಡೆದ ಕಾಂಗ್ರೆಸ್ 14 ಶಾಸಕರನ್ನು ಬಿಜೆಪಿಗೆ ಹೋಗುವ ಮುಖಾಂತರ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದನ್ನು ನಾವು ಮರೆತಿಲ್ಲ, ಜನರು ಮರೆಯುವುದಿಲ್ಲ ಎಂದರು.
ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ಮಾತನಾಡಿ, ಎಸ್.ಡಿ.ಪಿ.ಐ ಎಂದರೆ ಪ್ರಾಮಾಣಿಕತೆ, ಎಸ್.ಡಿ.ಪಿ.ಐ ಎಂದರೆ ಬದ್ಧತೆ, ಎಸ್.ಡಿ.ಪಿ.ಐ ಎಂದರೆ ಅಂಬೇಡ್ಕರ್ ರವರ ಸಂವಿಧಾನ.ಎಲ್ಲಾ ಜಾತಿಭೇದ ಮರೆತು ಒಂದಾದಾಗ ಮಾತ್ರ ದೇಶ ಉಳಿಯುವುದಕ್ಕೆ ಸಾಧ್ಯ, ಭಾಸ್ಕರ್ ಪ್ರಸಾದ್, ಅನಂದ ಮಿತ್ತಬೈಲ್, ನ್ಯಾಯವಾದಿ ಹರಿರಾಮ್ ನಂತಹ ನೈಜ ಕಟ್ಟ ಅಂಬೇಡ್ಕರ್ ವಾದಿಗಳು ಈ ಪಕ್ಷದ ಜೊತೆ ಇದ್ದಾರೆ. ಬನ್ನಿ ಎಸ್.ಡಿ.ಪಿ.ಐಯೊಂದಿಗೆ ಜೊತೆಗೂಡೋಣ ಎಂದರು.
ದಲಿತ ಮುಖಂಡರು ಹಾಗೂ ಎಸ್.ಡಿ.ಪಿ.ಐ ರಾಜ್ಯ ಮುಖಂಡರಾದ ಅಡ್ವೋಕೇಟ್ ಹರಿರಾಂ, ಮಾತನಾಡುತ್ತ ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸುವ ಮೂಲಕ ಬಿಜೆಪಿಯು ದ್ರೋಹ ಮಾಡುತ್ತಿದೆ, ದಲಿತರು, ಶೋಷಿತರು, ಮುಸಲ್ಮಾನರನ್ನು ಕಡೆಗಣಿಸಲಾಗಿದೆ. ಇವತ್ತು ನಾವು ಬೀದಿಗೆ ಬಂದು ನಿಲ್ಲಲು ಕಾರಣ ಎಪ್ಪತ್ತು ವರುಷ ಅಧಿಕಾರ ನಡೆಸಿದವರಾಗಿದ್ದಾರೆ. ನಾವು ಎಲ್ಲಾ ರಾಜಕೀಯ ಪಕ್ಷದವರನ್ನು ಕಂಡಿದ್ದೇವೆ, ಬಿಜೆಪಿಯ ಪರ ನಾವು ಇದ್ದರೆ ನಾವು ತುಂಬಾ ಒಳ್ಳೆಯವರು, ಎಪ್ಪತ್ತರ ದಶಕದಲ್ಲೂ ಕಾಂಗ್ರೆಸ್ ಮಾಡಿದ್ದು ಇದನ್ನೇ, ಅವರ ತಪ್ಪುಗಳನ್ನೂ ಪ್ರಶ್ನೆ ಮಾಡಿದರೆ ಉಗ್ರವಾದಿಗಳು, ನಕ್ಸಲರು ಎನ್ನುತ್ತಾರೆ. ಅಲ್ಪಸಂಖ್ಯಾತರಿಗೆ ಕೊಟ್ಟ ಸವಲತ್ತುಗಳನ್ನು ರಾಜಕೀಯ ಪಕ್ಷಗಳು ಸರ್ವನಾಶ ಮಾಡಿದೆ, ಇದನ್ನೆಲ್ಲ ಸರಿಮಾಡಬೇಕಾದರೆ ಚುನಾವಣೆಯಿಂದ ಮಾತ್ರ ಸಾಧ್ಯ ಎಂದರು.
ಎಸ್.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷರಾಗಿರುವ ವಿಕ್ಟರ್ ಮಾರ್ಟಿಸ್ ಮಾತನಾಡುತ್ತಾ, ಈ ಹೂವಿಗೂ, ಆ ಕೈಗೂ ಮತ ಕೊಟ್ಟು ತಪ್ಪು ಮಾಡಬೇಡಿ, ಅಪ್ಪ ತೋರಿಸಿ ಕೊಟ್ಟ ಆಲದ ಮರಕ್ಕೆ ಮತ ಹಾಕುವುದನ್ನು ನಿಲ್ಲಿಸಿ, ಎಸ್.ಡಿ.ಪಿ.ಐ.ಗೆ ಮತ ಕೊಟ್ಟು ಈ ಬಾರಿ ಮೂಡಬಿದ್ರೆ ಅಭ್ಯರ್ಥಿ ಆಲ್ಫಾನ್ಸೋ ಫ್ರಾಂಕೋರವರನ್ನು ಗೆಲ್ಲಿಸಿ ಪರ್ಯಾಯ ರಾಜಕಾರಣದತ್ತ ಮುನ್ನಡೆಯೋಣ ಎಂದರು.
ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ದಿಕ್ಸೂಚಿ ಭಾಷಣ ಮಾಡುತ್ತಾ, ಎಸ್.ಡಿಪಿ.ಐ. ಕಾಂಜಿ ಪಿಂಜಿಗಳ ಪಕ್ಷದಂತೆ ಅಲ್ಲ, ದೃಢವಾದ ಕಾರ್ಯಕರ್ತರ ಪಡೆ ಇದೆ. ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವವರೂ ಅಲ್ಲ. ಇ.ಡಿ. ಎನ್.ಐ.ಎ.ಯ ಮೂಲಕ ನಮ್ಮನ್ನು ಭಯಪಡಿಸುವುದು ಬೇಡ, ನಿಮ್ಮ ತಾಕತ್ತು ಚುನಾವಣಿ ಮೂಲಕ ತೋರಿಸಿ. ನಮ್ಮ ಅಭ್ಯರ್ಥಿಗಳಿಗೆ ಈಗಾಗಲೇ ಪೋನ್ ಕರೆ ಬರಲು ಶುರುವಾಗಿದೆ. ಕೋಟ್ಯಂತರ ರೂಪಾಯಿ ಹಾಗೂ ಇನ್ನಿತರ ಆಮಿಷಗಳಿಗೆ ಬಲಿಯಾಗುವವರಲ್ಲ, ಎಸ್.ಡಿ.ಪಿ.ಐಯನ್ನು ಮಣಿಸಲು ಸಾಧ್ಯವಿಲ್ಲ ಎಂಬುವುದನ್ನು ಮರೆಯಬೇಡಿ, ಬಿಬಿಎಂಪಿಯಲ್ಲಿ ಎಸ್.ಡಿ.ಪಿ.ಐ ಕಾರ್ಪೊರೇಟರ್ ಗೆ ಬಿಜೆಪಿ ನಾಯಕ ಅರ್ ಅಶೋಕ್ ಆಮಿಷ ಒಡ್ಡಿದಾಗ ಅದನ್ನು ಕಾಲಲ್ಲಿ ಒದ್ದ ಪಕ್ಷ ಎಸ್‌ಡಿ.ಪಿ.ಐ. ಈ ಪಕ್ಷವನ್ನು ಅಷ್ಟು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯದಿರಿ ಎಂದು ಖಾರವಾಗಿ ನುಡಿದರು.
ಸಮಾರಂಭದ ಅದ್ಯಕ್ಷತೆಯನ್ನು ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಅದ್ಯಕ್ಷ ಆಸಿಫ್ ಕೋಟೆಬಾಗಿಲು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ವುಮೆನ್ ಇಂಡಿಯಾ ಮೂವ್ಮೆಂಟ್ ರಾಷ್ರ್ಟೀಯ ಕಾರ್ಯದರ್ಶಿ ಆಯಿಷಾ ಬಜ್ಪೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಡಬಿದ್ರೆ ಕ್ಷೇತ್ರ ಕಾರ್ಯದರ್ಶಿ ನಿಸಾರ್ ಮರವೂರು, ವುಮೆನ್ ಇಂಡಿಯಾ ಮೂವ್ಮೆಂಟ್ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷೆ ರಿಫಾತ್, ಪುತ್ತಿಗೆ ಗ್ರಾಮ ಪಂಚಾಯತ್ ಉಪಾದ್ಯಕ್ಷೆ ತಾಹಿರಾ ಹಂಡೇಲ್, ಎಸ್.ಡಿ.ಪಿ.ಐ ಮೂಡಬಿದ್ರೆ ಬ್ಲಾಕ್ ಕಾರ್ಯದರ್ಶಿ ಶೆರಾಝ್, ಮುಲ್ಕಿ ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ಯು.ಕೆ.ಕೊಳ್ನಾಡ್, ಬಜ್ಪೆ ಬ್ಲಾಕ್ ಅದ್ಯಕ್ಷ ಸಲಾಂ ಸೂರಿಂಜೆ ಉಪಸ್ಥಿತರಿದ್ದರು. ಅಸ್ತಾರ್ ನಿರೂಪಿಸಿ, ಮುಬೀನ್ ಕೊಳ್ನಾಡ್ ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw