ದಕ್ಷಿಣ ಕನ್ನಡದವರ ಕನ್ನಡವನ್ನು ಗೌರವಿಸಬೇಕು | ಯತ್ನಾಳ್ ವಿರುದ್ಧ ಆಕ್ರೋಶ
ಸ್ಪೀಕರ್ ಯು.ಟಿ.ಖಾದರ್ ಅವರು ಮಂಗಳೂರು ಭಾಗದಲ್ಲಿ ಮಾತನಾಡುವ ಶೈಲಿಯ ಕನ್ನಡ ಭಾಷೆ ಬಳಸಿರೋದಕ್ಕೆ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು, ಕನ್ನಡಕ್ಕೆ ಇದು ಅಗೌರವ ಎಂಬಂತೆ ಪ್ರತಿಕ್ರಿಯಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಜನರ ಮಾತೃ ಭಾಷೆ ಕನ್ನಡ ಅಲ್ಲ. ತುಳು, ಬ್ಯಾರಿ, ಕೊಂಕಣಿ ಹೀಗೆ ಬೇರೆ ಬೇರೆ ಮಾತೃ ಭಾಷೆಗಳನ್ನು ಹೊಂದಿದ್ದರೂ ಸಹ, ಕನ್ನಡದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಜನಕ್ಕೆ ಹೆಚ್ಚು ಅಭಿಮಾನವಿದೆ. ಸರ್ಕಾರಿ ಕಚೇರಿ ಸೇರಿದಂತೆ ಹೆಚ್ಚಿನ ಭಾಗಗಳಲ್ಲಿ ಇಲ್ಲಿನ ಜನರು ಕನ್ನಡವನ್ನು ಬಳಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಕನ್ನಡ ಮಾತನಾಡುವಾಗ, ತುಳು, ಬ್ಯಾರಿ ಭಾಷೆಗಳು ಅದರ ಸಾಕಷ್ಟು ಶಬ್ದಗಳನ್ನು ಸೇರಿಸಿ ಕನ್ನಡ ಮಾತನಾಡುತ್ತಾರೆ. ಇದೇ ಕನ್ನಡವನ್ನು ಯು.ಟಿ.ಖಾದರ್ ಕೂಡ ಮಾತನಾಡುತ್ತಿದ್ದಾರೆ. ಯತ್ನಾಳ್ ಅವರು ಭಾಷೆಯ ಕಾರಣಕ್ಕಾಗಿ ಈ ರೀತಿಯ ಟೀಕೆ ಮಾಡುವುದು ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ಹಾಗೆ ನೋಡಿದರೆ, ಯತ್ನಾಳ್ ಅವರು ಮಾತನಾಡುವ ಉತ್ತರ ಕನ್ನಡ ಶೈಲಿಯ ಕನ್ನಡ ಭಾಷೆ ದಕ್ಷಿಣ ಕನ್ನಡದವರಿಗೂ ಅರ್ಥವಾಗುವುದಿಲ್ಲ, ಹಾಗಂತ ಯತ್ನಾಳ್ ಅವರಿಗೆ ಕನ್ನಡ ಗೊತ್ತಿಲ್ಲ, ಅವರು ಕನ್ನಡಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಹೇಳಿದರೆ ಅವರು ಒಪ್ಪುತ್ತಾರೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw