ಕೇವಲ ಕ್ಷಿಪಣಿ ಉಡಾವಣೆ ಪರೀಕ್ಷೆಗಾಗಿ ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ..!
ಕ್ಷಿಪಣಿ ಉಡಾವಣೆ ಪರೀಕ್ಷೆಗಾಗಿ 10 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಈ ಪ್ರಸಂಗ ಒಡಿಶಾದ ಕರಾವಳಿಯ ಬಾಲ್‌ಸೋರೆ ಜಿಲ್ಲೆಯಿಂದ ವರದಿಯಾಗಿದೆ. ತಾತ್ಕಾಲಿಕ ಶಿಬಿರಗಳಲ್ಲಿ ಉಳಿದುಕೊಳ್ಳುವ ಪ್ರತಿಯೊಬ್ಬರಿಗೆ 400 ರೂ. ನೀಡಲಾಗುತ್ತಿದೆ. ಜಾನುವಾರು ಹೊಂದಿರುವವರಿಗೆ ಹೆಚ್ಚುವರಿ 100 ರೂ. ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಇಲಾಖೆಯ ಅಧಿಕಾರಿಗಳು ಬಾಲ್‌ಸೋರೆ ಜಿಲ್ಲೆಯ ಅಧಿಕಾರಿಗಳ ಸಹಾಯದಿಂದ ಮಹಿಳೆಯರು, ಮಕ್ಕಳು ಹಾಗೂ ಜಾನುವಾರುಗಳು ಸೇರಿದಂತೆ 3.5 ಕಿ.ಮೀ ಶ್ರೇಣಿಯಲ್ಲಿರುವ 10 ಗ್ರಾಮಗಳ 10,581 ಜನರನ್ನು ಐಟಿಆರ್ ಉಡಾವಣೆಗೊಳಿಸುವ ಸ್ಥಳದಿಂದ ದೂರದಲ್ಲಿರುವ ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
“ಜನರು ಸುರಕ್ಷಿತ ಸ್ಥಳಗಳ ಆಶ್ರಯಗಳಲ್ಲಿ ಉಳಿದುಕೊಳ್ಳಲು ವಿಸ್ತಾರವಾದ ವ್ಯವಸ್ಥೆಗಳನ್ನು ನಾವು ಕೈಗೊಂಡಿದ್ದೇವೆ. ಮೂವರು ಪೊಲೀಸ್ ಅಧಿಕಾರಿಗಳ ಪ್ರತ್ಯೇಕ ತಂಡ ಸಾರ್ವಜನಿಕರ ರಕ್ಷಣೆಯ ಉಸ್ತುವಾರಿ ವಹಿಸಿಕೊಂಡಿದೆ. ವೈದ್ಯಕೀಯ ತಂಡ ಪಶು ವೈದ್ಯಕೀಯ ತಂಡ ಸೇರಿದಂತೆ ಹಲವು ತಂಡಗಳನ್ನು ಜನರ ಅಗತ್ಯ ಸೌಕರ್ಯ ನೀಡಿಕೆಗಾಗಿ ನಿಯೋಜಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದುಕೊಂಡಂತೆ ಎಲ್ಲ ಯೋಜನೆ, ಕಾರ್ಯಕ್ರಮಗಳು ನಡೆದರೆ ನಿಗದಿತ ವೇಳೆಯೊಳಗೆ ಕ್ಷಿಪಣಿಯನ್ನು ಹಾರಾಟ ಪರೀಕ್ಷೆಗೆ ಒಳಪಡಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth