“ಆಕ್ಸಿಜನ್ ದುರಂತ ಮರೆಮಾಚಲು ‘ಬೆಡ್ ಬುಕ್ಕಿಂಗ್ ದಂಧೆ’ ನಾಟಕ” - Mahanayaka
7:36 PM Thursday 12 - December 2024

“ಆಕ್ಸಿಜನ್ ದುರಂತ ಮರೆಮಾಚಲು ‘ಬೆಡ್ ಬುಕ್ಕಿಂಗ್ ದಂಧೆ’ ನಾಟಕ”

kumaraswamy
05/05/2021

ಮಂಡ್ಯ: ಚಾಮರಾಜನಗರದ ಆಕ್ಸಿಜನ್ ದುರಂತವನ್ನು ಮರೆಮಾಚಲು ರಾಜ್ಯ ಸರ್ಕಾರ ಬೆಡ್ ಬುಕ್ಕಿಂಗ್ ದಂಧೆಯ ನಾಟಕವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರವು ಸತ್ಯಾಂಶ ಮುಚ್ಚಿಟ್ಟು ಒಂದು ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರ ಘಟನೆಯಲ್ಲಿ ಸರ್ಕಾರದ ತಪ್ಪಿದೆ. ತಪ್ಪನ್ನು ಮರೆಮಾಚಲು ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. 4 ಸಾವಿರ ಹಾಸಿಗೆಯನ್ನು ಅಕ್ರಮವಾಗಿ ಕಾಯ್ದಿರಿಸಲಾಗಿದೆ ಎಂದು ಹೇಳಿ ಜನರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರಿನ ಸಂಸದ, ಶಾಸಕರು ಒಂದು ವಾರ್ ರೂಂ ಗೆ ತೆರಳಿ ದೊಡ್ಡ ದಂಧೆ ಬಯಲು ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಮಾಯಕ ಜನರು ಸಾಯುತ್ತಿರುವಾಗ ಸಮುದಾಯವೊಂದಕ್ಕೆ ಸೇರಿದವರ ಹೆಸರು ಓದಿ ಮದರಸಾ ಮಾಡಲು  ಹೊರಟಿದ್ದೀರಾ ಎಂದು ಕುಮಾರಸ್ವಾಮಿ ತೇಜಸ್ವಿ ಸೂರ್ಯರನ್ನು ತರಾಟೆಗೆತ್ತಿಕೊಂಡರು.

ಇತ್ತೀಚಿನ ಸುದ್ದಿ