ಆಕ್ಸಿಜನ್ ದುರಂತದ ಸಂದರ್ಭದಲ್ಲಿ ನಾನು ಹುಚ್ಚನಂತೆ ಅಳ್ತಾ ಇದ್ದೆ: ರಮೇಶ್ ಕುಮಾರ್
ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಸಂಭವಿಸಿದ ವೇಳೆ ನಾನು ಹುಚ್ಚನಂತೆ ಅಳ್ತಾ ಇದ್ದೆ. ಇದಕ್ಕೆ ಯಾರು ಹೊಣೆ? ಎಂದು ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಅವರು ಪ್ರಶ್ನಿಸಿದ್ದು, ಈ ಘಟನೆಯಿಂದ ತೀವ್ರ ನೋವಾಗಿತ್ತು. ಎಷ್ಟೇ ಸಮಾಧಾನ ಪಡಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಾನು ಪತ್ರ ಬರೆದಿದ್ದು, ಈ ವಯಸ್ಸಿನಲ್ಲಿ ನಾನು ನೀವು ಬದುಕಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದೇವೆ. ಆದರೆ ದುರಂತದಲ್ಲಿ ಸಾವನ್ನಪ್ಪಿದವರಿಗೆ ಬದುಕುವ ಆಸೆ ಇರಲ್ವಾ? ಎಂದು ಪ್ರಶ್ನಿಸಿದ್ದೆ ಎಂದು ತಿಳಿಸಿದ್ದಾರೆ.
ಇನ್ನೂ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆತ್ತಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಸಿಬ್ಬಂದಿಗೆ ಬೈಯಲು ನಾನು ಅವರ ಶತ್ರುನಾ? ಎಂದು ಪ್ರಶ್ನಿಸಿದರು. ಪೊಲೀಸರು ವಾಹನಗಳನ್ನು ಸಾಲು ಸಾಲಾಗಿ ನಿಲ್ಲಿಸುತ್ತಿದ್ದರು. ಆದರೆ, ನನ್ನ ವಾಹವನ್ನು ಹೋಗುವಂತೆ ಹೇಳಿದರು. ಹಾಗಾಗಿ ನನಗೊಂದು, ಜನ ಸಾಮಾನ್ಯರಿಗೊಂದು ನೀತಿಯೇ? ಎಂಬ ಕಾರಣಕ್ಕಾಗಿ, ನಿಮ್ಮ ಮಕ್ಕಳಿಗೆ ಒಳ್ಳೆಯದಾಗಬೇಡವೇ? ಎಂದು ಪ್ರಶ್ನಿಸಿದ್ದೆ ಎಂದು ಹೇಳಿದರು.
ಇನ್ನಷ್ಟು ಸುದ್ದಿಗಳು…
“ನೀವು ರೈತರ ತಲೆ ಒಡೆದು ಹಾಕುವುದನ್ನು ನಾನು ನೋಡಬೇಕು” | ಪೊಲೀಸರಿಗೆ ಆದೇಶ ನೀಡಿದ ಅಧಿಕಾರಿ
ಮಹಿಳಾ ರೋಗಿಗೆ ಲೈಂಗಿಕ ದೌರ್ಜನ್ಯ ನೀಡಿ ಹತ್ಯೆಗೆ ಯತ್ನಿಸಿದ ವಾರ್ಡ್ ಬಾಯ್
ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ ವಿರೋಧ | ಪೊಲೀಸರಿಗೆ ದೂರು
ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ
ಕಲಬುರ್ಗಿ ಜಿಲ್ಲೆಯ ಜನರು ಸೋಂಬೇರಿಗಳು ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸಚಿವ ಮುರುಗೇಶ್ ನಿರಾಣಿ
ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!