ಆಕ್ಸಿಜನ್ ಘಟಕದಲ್ಲಿ ಭಾರೀ ಸ್ಫೋಟ ಇಬ್ಬರು ಸಾವು | ಇಬ್ಬರಿಗೆ ಗಂಭೀರ ಗಾಯ
05/05/2021
ಲಕ್ನೋ: ಆಕ್ಸಿಜನ್ ಘಟಕದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ಬುಧವಾರ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚಿನ್ ಹಟ್ ಪ್ರದೇಶದ ಆಮ್ಲಜನಕ ಘಟಕದಲ್ಲಿ ಖಾಲಿಯಾಗಿರುವ ಸಿಲಿಂಡರ್ ಗಳಿಗೆ ಆಕ್ಸಿಜನ್ ತುಂಬುತ್ತಿರುವ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.
ಆಕ್ಸಿಜನ್ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಎಂದು ಚಿನ್‌ಹಟ್ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‍ಒ) ಧನಂಜಯ್ ಪಾಂಡೆ ತಿಳಿಸಿದ್ದಾರೆ.