ಆಕ್ಸಿಜನ್ ಕೊರತೆಯಿಂದ ನವಜಾತ ಶಿಶು ಸಾವು - Mahanayaka

ಆಕ್ಸಿಜನ್ ಕೊರತೆಯಿಂದ ನವಜಾತ ಶಿಶು ಸಾವು

death
09/04/2022

ದಾವಣಗೆರೆ: ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ನವಜಾತ ಶಿಶು ಸಾವಿಗೀಡಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.

ಶೃಂಗಾರ ಬಾಬು ತಾಂಡಾದ ಹಾಲೇಶ್-ಸ್ವಾತಿ ದಂಪತಿಯವರ ಚೊಚ್ಚಲ ಮಗು ನೀರಿಕ್ಷೆಯಲ್ಲಿದ್ದು, ಶುಕ್ರವಾರ ತಡರಾತ್ರಿ ಸ್ವಾತಿಯವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಸವಪಟ್ಟಣ ಪ್ರಾಥಮಿಕ ಕೇಂದ್ರಕ್ಕೆ ದಾಖಲಿಸಿದ್ದರು.

ಇಂದು ಬೆಳಗ್ಗೆ 7 ಗಂಟೆಸುಮಾರಿಗೆ ಸ್ವಾತಿಯವರಿಗೆ ಹೆರಿಗೆಯಾಗಿದ್ದು ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾಳಿಗೆ  ಆಸ್ಪತ್ರೆಗೆ ಕರೆದೊಯ್ಯಲು ಮಗುವಿನ ಪೋಷಕರು ನಿರ್ಧರಿಸಿದರು.

ಆದರೆ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆಯಿದೆ, ಬೇರೊಂದು ಆಂಬುಲೆನ್ಸ್ ದಾರಿ ಮಧ್ಯೆ ಬರುತ್ತದೆ ಎಂದು ಚಾಲಕ ಕರೆದೊಯ್ದಿದ್ದಾನೆ. ಆದರೆ ಹೊನ್ನಾಳಿಗೆ ಹೋಗುವುದರೊಳಗೆ ಉಸಿರಾಟದ ತೊಂದರೆ ಹೆಚ್ಚಾಗಿದ್ದು, ಮಗು ಸಾವನ್ನಪ್ಪಿದೆ. ಇದರಿಂದ ರೊಚ್ಚಿಗೆದ್ದ  ಮಗುವಿನ ಪೋಷಕರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಬಸವಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಧ್ವಂಸಪಡಿಸಿಕೊಳ್ಳುತ್ತಿದೆ: ಪ್ರಕಾಶ್ ಕಾರಟ್

ಹತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು ನಿಷೇಧ ಮಾಡಿದ  ಗೂಗಲ್

ಸುಂದರ ಹುಡುಗಿಯನ್ನು ಮಗ ಬಳಸಿಕೊಳ್ಳದಿದ್ದರೆ ತಂದೆ-ತಾಯಿ ಹೊಣೆಯೇ?: ಈಶ್ವರಪ್ಪ ವಿವಾದಿತ ಹೇಳಿಕೆ

ಶಾರೂಖ್ ಖಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ನಯನತಾರಾ

ಎಟಿಎಂನಿಂದ ಹಣ ಡ್ರಾ ಮಾಡಬೇಕಾದರೆ ಕಾರ್ಡ್ ಬೇಕಾಗಿಲ್ಲ!: ಏನಿದು ಕಾರ್ಡ್ ಲೆಸ್ ಕ್ಯಾಶ್?

ಇತ್ತೀಚಿನ ಸುದ್ದಿ