ಬೆಂಗಳೂರು: ಆಕ್ಸಿಜನ್ ಇಲ್ಲದೇ ಪರದಾಡುತ್ತಿದ್ದ 10 ಜನರ ಪ್ರಾಣ ಉಳಿಸಿದ ಸೋನು ಸೂದ್
ನವದೆಹಲಿ: ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದ 10ಕ್ಕೂ ಹೆಚ್ಚು ಸೋಂಕಿತರಿಗೆ ಸಕಾಲಕ್ಕೆ ಆಕ್ಸಿಜನ್ ಒದಗಿಸುವ ಮೂಲಕ ನಟ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಮಾನವೀಯ ಕೆಲಸ ಮಾಡಿದೆ.
ಬೆಂಗಳೂರಿನ ಯಲಹಂಕ ಬಳಿಯ ಅರ್ಕ ಖಾಸಗಿ ಆಸ್ಪತ್ರೆಯಲ್ಲಿ 10ಕ್ಕೂ ಅಧಿಕ ಕೊವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಾತ್ರೋರಾತ್ರಿ ಆಕ್ಸಿಜನ್ ಖಾಲಿಯಾಗಿದ್ದರಿಂದಾಗಿ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದರು.
ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ ಆಗುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ಯಲಹಂಕ ನ್ಯೂಟೌನ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಅರ್ಕ ಆಸ್ಪತ್ರೆ ಬಳಿ ಬಂದ ಇನ್ಸ್ ಪೆಕ್ಟರ್ ಸತ್ಯನಾರಾಯಣ್, ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿದ್ದಾರೆ.
ಈ ವೇಳೆ ತಕ್ಷಣವೇ ಸ್ಪಂದಿಸಿದ ಟ್ರಸ್ಟ್ 11 ಆಕ್ಸಿಜನ್ ಸಿಲಿಂಡರ್ ಗಳನ್ನು ತಕ್ಷಣವೇ ಒದಗಿಸಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ದೊರಕಿದ್ದರಿಂದಾಗಿ 10ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ಆಕ್ಸಿಜನ್ ನೀಡಲು ಸಾಧ್ಯವಾಗಿದೆ. ಕರೆ ಮಾಡಿ ಕೆಲವೇ ಕ್ಷಣಗಳಲ್ಲಿ ಬೈಕ್ ಮತ್ತು ಕಾರುಗಳಲ್ಲಿ ಟ್ರಸ್ಟ್ ಸದಸ್ಯರು ಆಕ್ಸಿಜನ್ ತಲುಪಿಸಿದ್ದಾರೆ. ಆಕ್ಸಿಜನ್ ಬರುವುದು ಕೆಲವೇ ತಾಸು ತಡವಾಗಿದ್ದರೂ ಚಾಮರಾಜನಗರದಲ್ಲಿ ನಡೆದಂತಹ ದೊಡ್ಡ ದುರಂತವೇ ನಡೆದು ಹೋಗುತ್ತಿತ್ತು ಎಂದು ಹೇಳಲಾಗಿದೆ.