ಮೂಡುಬಿದಿರೆ: ಜು.9ರಂದು ದಿ.ಪಿ.ಡೀಕಯ್ಯನವರ ಸ್ಮರಣಾ ದಿನಾಚರಣೆ: ಶಾಸಕಿ ಭಾಗೀರಥಿ ಮುರುಳ್ಯ, ವಸಂತ ಬಂಗೇರ, ಡಾ.ಶಿವಕುಮಾರ್, ಲಕ್ಷ್ಮೀ ಗೋಪಿನಾಥ್ ಭಾಗಿ
ಮೂಡುಬಿದ್ರೆ: ತುಲುನಾಡ್ ಮನ್ಸ ಸಮಾಜ ಸೇವಾ ಸಂಘ ಮತ್ತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ಜಂಟಿ ಆಶ್ರಯದಲ್ಲಿ ಅಂಬೇಡ್ಕರ್ ವಾದಿ, ಮಹಾ ಬೌದ್ಧ ಉಪಾಸಕ ದಿ.ಪಿ.ಡೀಕಯ್ಯನವರ ಸ್ಮರಣಾ ದಿನಾಚರಣೆಯನ್ನು ಜುಲೈ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಮಾಜಿ ಶಾಸಕರಾದ ವಸಂತ ಬಂಗೇರ, ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್, ಬಹುಜನ ಹಿರಿಯ ಚಳುವಳಿಗಾರ್ತಿ ಲಕ್ಷ್ಮೀ ಗೋಪಿನಾಥ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಲುನಾಡ್ ಮನ್ಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಎಂ.ಶಾಂತಾರಾಮ್ ವಹಿಸಲಿದ್ದಾರೆ. ಸಂಘದ ಗೌರವ ಸಲಹೆಗಾರರಾದ ಸೋಮಪ್ಪ ಅಲಂಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.
ಅಚ್ಯುತ ಸಂಪಿಗೆ ಇವರು ಪಿ.ಡೀಕಯ್ಯ ಇವರ ಬದುಕು ಮತ್ತು ಹೋರಾಟದ ವಿಚಾರವಾಗಿ ಮಾತನಾಡಲಿದ್ದಾರೆ. ಡಾ.ವಾಸುದೇವ ಬೆಳ್ಳೆ ಅವರು, ಡೀಕಯ್ಯ ಮತ್ತು ಚಳುವಳಿ ಬಾಂಧವ್ಯಗಳು ಎಂಬ ವಿಚಾರದಲ್ಲಿ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡೀಕಯ್ಯ ಅವರ ಪತ್ನಿ, ಬಹುಜನ ಚಳುವಳಿಗಾರ್ತಿ ಆತ್ರಾಡಿ ಅಮೃತ ಶೆಟ್ಟಿ, ದಸಂಸ ರಾಜ್ಯ ಸಂಯೋಜಕ ಚಂದು ಎಲ್, ತುಲುನಾಡ್ ಮನ್ಸ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಣ್ಣ ಕೊಯ್ಯೂರು, ದಸಂಸ ಬೆಳ್ತಂಗಡಿ ಇದರ ನೇಮಿರಾಜ್ ಕಿಲ್ಲೂರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಾಬು ಹಾಂದಿ, ಆನಂದ ಕೊಪ್ಪ, ರಮೇಶ್ ಕೆಳಗೂರು, ಶೇಖರ್ ಲಾಯಿಲ, ವಸಂತ ಬ್ಯಾದನೆ, ಅಣ್ಣ ಖಂಡಿಗ, ಕೃಷ್ಣಪ್ಪ ಬಂಬಿಲ, ಬಿ.ಕೆ.ವಸಂತ ಬೆಳ್ತಂಗಡಿ, ಸಂಜೀವ ಆರ್, ರಮೇಶ್ ಆರ್, ತಿಮ್ಮಪ್ಪ ಮಾಸ್ತಿಕಟ್ಟೆ, ಪ್ರಭಾಕರ ಶಾಂತಿಗೋಡು, ಎನ್.ಕೆ.ಸುಂದರ್, ಪೂವಪ್ಪ ಮಾಸ್ಟರ್, ಉದಯ ಗೋಳಿಯಂಗಡಿ ಸೇರಿದಂತೆ ಹಲವು ಸಮಾಜದ ಮುಖಂಡರು ಉಪಸ್ಥಿತರಿರಲಿದ್ದಾರೆ.
ಈ ಬಾರಿಯ ಎಸ್ ಎಸ್ ಎಲ್ ಮತ್ತು ಪಿಯುಸಿಯಲ್ಲಿ ಗರಿಷ್ಠ ಶೇ.85 ಹಾಗೂ ಮೇಲ್ಪಟ್ಟು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಿ ಗೌರವಿಸಲಾಗುವುದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw