ತಲೆಗೆ ಬಲವಾದ ಏಟು ಬಿದ್ದಿರುವ ಬಗ್ಗೆ ಎಂಬ ಅನುಮಾನವಿದೆ: ಪಿ.ಡೀಕಯ್ಯ ಕುಟುಂಬಸ್ಥರ ಹೇಳಿಕೆ
ಬೆಳ್ತಂಗಡಿ: ಡೀಕಯ್ಯ ಅವರ ಮರಣದ ಬಗ್ಗೆ ಹಲವಾರು ಅನುಮಾನಗಳಿವೆ ಸಮಗ್ರ ತನಿಖೆಯಾಗಬೇಕು ಎಂದು ಅವರ ಬಾವ ಪದ್ಮನಾಭ ಹಾಗೂ ಅವರ ಸಹೋದರಿಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪದ್ಮನಾಭ ಅವರು, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಡೀಕಯ್ಯ ಅವರು ಮನೆಯಲ್ಲಿ ಬಿದ್ದಿದ್ದಾರೆ ಬೇಗ ಬರಬೇಕು ಅಂತ ದೂರವಾಣಿ ಕರೆ ಬಂತು ತಕ್ಷಣವೇ ಅಲ್ಲಿಗೆ ಓಡಿ ಹೋಗಿದ್ದೇನೆ. ಆಗ ಡೀಕಯ್ಯರು ಮನೆಯೊಳಗೆ ಬಿದ್ದಿದ್ದರು. ನಾವು ಸೇರಿ ಅವರನ್ನು ಮೇಲೆತ್ತಿದೆವು ಆಗ ಕುತ್ತಿಗೆ ಬಲವಿಲ್ಲದ ಹಾಗೆ ಇದ್ದರು. ಮೇಲೆತ್ತಿದಾಗ ತಲೆಯ ಕುತ್ತಿಗೆಯ ಹಿಂಭಾಗದಿಂದ ಕೈಗೆ ರಕ್ತ ತಾಗಿತ್ತು. ಕುತ್ತಿಗೆ ಹಿಂಭಾಗದಲ್ಲಿ ಮೆತ್ತನೆಯಾಗಿತ್ತು. ಅಲ್ಲದೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಅವರ ಬಾಯಿಯಲ್ಲಿ ಮತ್ತು ಕಿವಿಯಲ್ಲಿ ರಕ್ತ ಬಂದಿತ್ತು. ವೇಣೂರಿನಲ್ಲಿ ವೈದ್ಯರು ಪರೀಕ್ಷಿಸಿ ಬಿ.ಪಿ ಸರಿಯಾಗಿದೆ ಎಂದು ಹೇಳಿದ್ದರು. ಅಲ್ಲಿ ಹೋದ ಮೇಲೆ ಬಿ.ಪಿ ಹೆಚ್ಚಾಗಿ ಅವರು ಮೃತಪಟ್ಟರು ಎಂದು ಹೇಳುತ್ತಿದ್ದಾರೆ ಎಂದರು.
ಅವರು ಬಿದ್ದು ಗಾಯಗೊಂಡಿದ್ದರು ಎಂದು ಮೊದಲು ಹೇಳಲಾಗಿತ್ತು. ಆದರೆ ಇದೀಗ ಬೇರೆಯೇ ಹೇಳುತ್ತಿದ್ದಾರೆ. ಇದೆಲ್ಲವೂ ಅವರ ಮರಣದ ಬಗ್ಗೆ ಅನುಮಾನ ಮೂಡಲು ಕಾರಣವಾಗುತ್ತಿದೆ. ಡೀಕಯ್ಯ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಇದೆಲ್ಲ ಸಂಭವಿಸಿದ್ದು ಇದು ಅನುಮಾನ ಹೆಚ್ಚಿಸಲು ಕಾರಣವಾಗಿದೆ ಒಟ್ಟು ವಿಚಾರಗಳ ಸಮಗ್ರವಾದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ತಲೆಯ ಹಿಂಭಾಗದಲ್ಲಿ ಗಾಯವಾದ ಹಾಗೆ ರಕ್ತ ಬಂದಿರುವುದು ಕಾಣಿಸುತ್ತಿತ್ತು ಅವರ ಮರಣದ ಬಗ್ಗೆ ಹಲವಾರು ಅನುಮಾನಗಳಿವೆ. ಅದೆಲ್ಲದರ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು ಎಂದು ಲೋಲಾಕ್ಷ ಅವರು ಒತ್ತಾಯಿಸಿದ್ದಾರೆ.
ಅವರೊಬ್ಬರೇ ಮನೆಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಅಲ್ಲಿ ಏನು ನಡೆದಿದೆ ಎಂಬ ಬಗ್ಗೆ ತನಿಖೆಯಾಗಬೇಕು. ನಾವು ಈ ಬಗ್ಗೆ ಹಲವರು ವೈದ್ಯರುಗಳನ್ನು ಸಮೀಪಿಸಿ ಮಾಹಿತಿ ಪಡೆದುಕೊಂಡಿದ್ದೇವೆ ಬಲವಾದ ಏಟು ಬಿದ್ದಿರಬೇಕು ಅನುಮಾನ ಎಲ್ಲರಿಂದ ವ್ಯಕ್ತವಾಗುತ್ತಿದೆ. ಆಸ್ಪತ್ರೆಯಲ್ಲಿ ಇದ್ದಾಗಲೇ ನಾವು ಈ ಅನುಮಾನ ವ್ಯಕ್ತಪಡಿಸಿದ್ದೆವು ಅವರ ಪತ್ನಿ ಹಾಗೂ ಇತರರು ಹಾಗೇನು ಇಲ್ಲ ಎಂದು ಹೇಳಿದರಿಂದ ಸುಮ್ಮನಿದ್ದೆವು. ಇದೀಗ ಮೆಡಿಕಲ್ ವರದಿಯಲ್ಲಿಯೂ ಗಾಯದ ಬಗ್ಗೆ ಮಾಹಿತಿ ಇದ್ದು ಇದೇ ಅನುಮಾನ ವ್ಯಕ್ತವಾಗುತ್ತಿದೆ ಅದರಿಂದಾಗಿ ದೂರು ಕೊಡುವ ಕಾರ್ಯ ಮಾಡಿದ್ದೇವೆ ಎಂದರು.
ಪೊಲೀಸರಿಗೆ ದೂರು ಕೊಡುವುದು ಬೇಡ ಎಂದು ಅವರ ಪತ್ನಿ ಹೇಳಿದ್ದರಿಂದಾಗಿ ಮತ್ತೆ ಹಲವು ಬಾರಿ ಆಲೋಚನೆ ಮಾಡಿ ದೂರು ನೀಡಿದ್ದೇವೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ ಒಟ್ಟು ಘಟನೆಗಳು ಏನಾಗಿದೆ ಎಂಬ ಬಗ್ಗೆ ಸತ್ಯ ಹೊರಬರಬೇಕಾಗಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka