BreakingNews: ಪಿ. ಡೀಕಯ್ಯ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಮುಖಂಡ ಪಿ. ಡೀಕಯ್ಯ ಅವರ ಮರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ಕುಟುಂಬಸ್ಥರು ನೀಡಿರುವ ದೂರಿನ ಹಿನ್ನಲೆಯಲ್ಲಿ ಸೋಮವಾರ ಪದ್ಮುಂಜದಲ್ಲಿ ಅವರ ಮೃತದೇಹವನ್ನು ಹೊರತೆಗೆದು ತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿ ಮತ್ತೆ ಮರಣೋತ್ತರಪರೀಕ್ಷೆ ನಡೆಸಲಾಯಿತು.
ಜು. 8 ರಂದು ಪಿ. ಡೀಕಯ್ಯ ಅವರು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರು ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದರು ಎಂದು ವರದಿಗಳು ಬಂದಿದ್ದವು. ಇದೀಗ ಅವರ ಮರಣದ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಮೃತದೇಹವನ್ನು ಇದೀಗ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಡೀಕಯ್ಯ ಅವರು ಒಬ್ಬರೇ ಮನೆಯಲ್ಲಿ ಇದ್ದು ಅವರ ಪತ್ನಿ ಪದ್ಮುಂಜದ ಕುಟುಂಬದ ಮನೆಯಲ್ಲಿ ಇದ್ದ ದಿನ ಡೀಕಯ್ಯ ಅವರು ಗರ್ಡಾಡಿಯ ಮನೆಯಲ್ಲಿ ಅಸ್ವಸ್ಥರಾಗಿದ್ದಾರೆ. ಬೆಳಿಗ್ಗೆ ಮನೆಯವರು ಬಂದಾಗ ಮನೆಯ ಬಾಗಿಲು ಹಾಕಿದ್ದು ಅವರು ಬಾಗಿಲುವತೆಗೆಯದ ಹಿನ್ನಲೆಯಲ್ಲಿ ಮನೆಯ ಬಾಗಿಲನ್ನು ಒಡೆದುವಮನೆಯೊಳಗೆ ಹೋದಾಗ ಅವರು ಅಡುಗೆ ಮನೆಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ನಿಧನ ಹೊಂದಿದ್ದರು. ಇದೀಗ ಅನುಮಾನ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಒಟ್ಟು ಘಟನೆಯ ಬಗ್ಗೆ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಆರಂಭಿಸಿದ್ದಾರೆ.ನಿಯಮದಂತೆ ಮಹಜರು ನಡೆಸುತ್ತಿದ್ದು , ಬಳಿಕ ದಪನ ಮಾಡಲಾದ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಇಂದು ಸ್ಥಳದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಾಮ್ , ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಎಂ.ಎಂ , ಎಎಸ್ಐ ದೇವಪ್ಪ , ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೋಲಿಸರು ಉಪಸ್ಥಿತರಿದ್ದರು. ಮಂಗಳೂರಿನ ಹಾಗೂ ಬೆಳ್ತಂಗಡಿಯ ವೈದ್ಯರ ತಂಡ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka