ಪಿ. ಡೀಕಯ್ಯರವರ ಪುಣ್ಯ ಸ್ಮರಣೆ: ಬೋಧಿರತ್ನ ಭಂತೇಜಿ ನೇತೃತ್ವದಲ್ಲಿ ಪುಣ್ಯಾನುಮೋದನಾ ಕಾರ್ಯಕ್ರಮ

p dikaiha punya smarane 1
04/09/2022

ಮಂಗಳೂರು: ಇತ್ತೀಚೆಗೆ ನಿಧನರಾದ ಅಂಬೇಡ್ಕರ್ ವಾದಿ, ಸಾಮಾಜಿಕ ಪರಿವರ್ತನಾ ಚಳುವಳಿಯ ನೇತಾರರಾದ ಪಿ.ಡೀಕಯ್ಯ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪಿ.ಡೀಕಯ್ಯನವರ ನಿವಾಸದಲ್ಲಿ ನಡೆಯಿತು.

ಬೋಧಿರತ್ನ ಭಂತೇಜಿ ರವರ ನೇತೃತ್ವದಲ್ಲಿ ಪುಣ್ಯಾನುಮೋದನಾ ಕಾರ್ಯಕ್ರಮ ನಡೆಯಿತು. ಬೌದ್ಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ  ಪಿ.ಡೀಕಯ್ಯನವರ ಪುಣ್ಯ ಸ್ಮರಣೆ ನಡೆಯಿತು.

ಇದೇ ವೇಳೆ ಪಿ.ಡೀಕಯ್ಯನವರಿಗೆ ನುಡಿನಮನ ಸಲ್ಲಿಸಿದ ಅಕ್ಕಾ ಐಎಎಸ್ ಅಕಾಡೆಮಿ(Akka IAS Academy)ಯ ನಿರ್ದೇಶಕ ಡಾ.ಶಿವಕುಮಾರ, ಪಿ.ಡೀಕಯ್ಯನವರು ಸಮಾಜ ಪರಿವರ್ತನೆಯ ಮೂಲಕ ದೊಡ್ಡ ಸಮೂಹವೊಂದನ್ನು ಸೃಷ್ಟಿ ಮಾಡಿದ್ದಾರೆ. ನಾನು ವೈಯಕ್ತಿಕವಾಗಿ ಡೀಕಯ್ಯ ಅವರ ಮಾತುಗಳನ್ನು ಹೆಚ್ಚು ಕೇಳಿರಲಿಲ್ಲ, ನಾನು ಎಂಎ ಮುಗಿಸಿ ಆಗ ತಾನೆ ಪಿಹೆಚ್ ಡಿಗೆ ಸೇರಿದ ಸಂದರ್ಭದಲ್ಲಿ ಅವರು ನನಗೆ ಪರಿಚಯವಾದರು. ಅಂದಿನಿಂದ ಅವರೊಂದಿಗೆ ಒಡನಾಟವಿತ್ತು. ಮಕ್ಕಳಿಗಿಂತಲೂ ಹೆಚ್ಚಾಗಿ ಅವರು ನಮ್ಮನ್ನು ಟ್ರೀಟ್ ಮಾಡಿದ್ದಾರೆ ಎಂದ ಅವರು, ಪಿ.ಡೀಕಯ್ಯನವರ ಜೊತೆಗಿನ ಒಡನಾಡವನ್ನು ಸ್ಮರಿಸಿದರು.

p dikaiha punya smarane 5

ಡಾ.ಶ್ರೀನಿವಾಸ್ ಮಾತನಾಡಿ,  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿ.ಡೀಕಯ್ಯನವರು ರಕ್ತ ಸಂಬಂಧಕ್ಕೂ ಮಿಗಿಲಾಗಿದ್ದರು. ಅವರು ಹೇಗೆ ಚಳುವಳಿ ಕಟ್ಟಬೇಕು ಎನ್ನುವುದನ್ನು ತೋರಿಸಿದವರು. ಚಳುವಳಿಯ ಏಳು ಬೀಳುಗಳನ್ನು ಅನುಭವಿದರೂ ಎಂದಿಗೂ ಕುಗ್ಗಿದವರಲ್ಲ, ಸಮಾಜ ಪರಿವರ್ತನೆಗೆ  ಸಾವಿರಾರು ಕ್ಯಾಂಪ್ ಗಳನ್ನು ಮಾಡಿದವರು ಎಂದು ಸ್ಮರಿಸಿದರು.

ಈ ವೇಳೆ ಹೋರಾಟಗಾರ್ತಿ, ಪಿ.ಡೀಕಯ್ಯನವರ ಧರ್ಮಪತ್ನಿ ಆತ್ರಾಡಿ ಅಮೃತ ಶೆಟ್ಟಿ, ಬಹುಜನ ಚಳುವಳಿಯ ಹಿರಿಯ ನಾಯಕಿ ಲಕ್ಷ್ಮೀ ಗೋಪಿನಾಥ್,  ಪ್ರಜ್ವಲ್ ಮೌರ್ಯ, ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರಾದ ದಾಸಪ್ಪ ಎಡಪದವು, ಅಚ್ಯುತ ಸಂಪಿಗೆ, ಸತೀಶ್ ಕಕ್ಕೆಪದವು, ಲಕ್ಷ್ಮಣ್ ಸೇರಿದಂತೆ ಹಲವು ನಾಯಕರು ಇದ್ದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version