ನಾಳೆ(ಜುಲೈ 9) ಬೆಳಗ್ಗೆ ಬೆಳ್ತಂಗಡಿಯಲ್ಲಿ ಪಿ.ಡೀಕಯ್ಯನವರ ಅಂತಿಮ ದರ್ಶನ
ಬೆಳ್ತಂಗಡಿ: ತುಳುನಾಡಿನಲ್ಲಿ ಅಂಬೇಡ್ಕರ್ ವಾದವನ್ನು ಬಿತ್ತಿದ ಚಳುವಳಿಗಾರ, ಮನುವಾದದ ವಿರುದ್ಧದ ಗಟ್ಟಿ ಧ್ವನಿ ಪಿ.ಡೀಕಯ್ಯನವರು ನಿಧನರಾಗಿದ್ದು, ಇವರ ಅಂತಿಮ ದರ್ಶನವು ಜುಲೈ 9ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಬೆಳಗ್ಗೆ 9:30ಕ್ಕೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ.
ಯುವ ಜನತೆಯ ಎದೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದ ಪಿ.ಡೀಕಯ್ಯನವರು, ಅಸ್ಪೃಷ್ಯತೆ, ಅಸಮಾನತೆ ವಿರುದ್ಧದ ಗಟ್ಟಿ ಧ್ವನಿಯಾಗಿದ್ದರು. ಕರಾವಳಿತ ಹೋರಾಟಗಳಿಗೆ ಮಾರ್ಗದರ್ಶಕರಾಗಿದ್ದರು.
ತುಳುನಾಡಿನಲ್ಲಿ ಬಹುಜನ ಚಳುವಳಿಯನ್ನು ತಮ್ಮದೇ ಆದ ಪ್ರಯೋಗಗಳಿಂದ ಕಟ್ಟಿದ್ದರು. ತುಳುನಾಡಿನ ಮೂಲ ಪುರುಷರ ಬಗೆಗೆ ಅಪಾರ ಜ್ಞಾನ ಹೊಂದಿದ್ದ ಡೀಕಯ್ಯನವರ ಅಗಲಿಕೆಗೆ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತವಾಗಿದೆ. ನಾಳೆ ನಡೆಯಲಿರುವ ಅಂತಿಮ ದರ್ಶನದಲ್ಲಿ ನಾಡಿನ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka