ಪಾಲಾರ್ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡ “ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್”

ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್ ಅವರಿಂದ ಮೆಚ್ಚುಗೆ ಪಡೆದ ಕನ್ನಡ ‘ಪಾಲಾರ್’ ಚಿತ್ರದ ವಿತರಣಾ ಹಕ್ಕನ್ನು ಕರ್ನಾಟಕದ ಪ್ರಮುಖ ಸಿನಿಮಾ ವಿತರಣಾ ಸಂಸ್ಥೆಯಾದ “ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್” ಪಡೆದುಕೊಂಡಿದೆ.
“ಪಾಲಾರ್” ಸಿನಿಮಾದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಶೀಘ್ರದಲ್ಲೆ ಸಿನೆಮಾ ಬಿಡುಗಡೆ ಆಗಲಿದೆ. ಅದಕ್ಕಿಂತ ಮುಂಚೆ ಪ್ರತೀ ಜಿಲ್ಲೆಯಲ್ಲೂ ಪ್ರೀಮಿಯರ್ ಶೋ ಆಯೋಜನೆಯಾಗಲಿದೆ ಎಂದು ನಿರ್ದೇಶಕ ಜೀವಾ ನವೀನ್ ಮಹಾನಾಯಕಕ್ಕೆ ತಿಳಿಸಿದ್ದಾರೆ.
ಶೋಷಣೆಗಳ ವಿರುದ್ಧ ಜನ ಸಾಮಾನ್ಯರ ಸಂಘರ್ಷದ ಕಥೆಯನ್ನು ಹೊಂದಿರುವ ಪಾಲಾರ್ ಚಿತ್ರ, ಬಿಡುಗಡೆಗೂ ಮೊದಲೇ ಸಾಕಷ್ಟು ಜನಪ್ರಿಯತೆ ಹೊಂದಿದೆ. ಸಾಕಷ್ಟು ಹಳ್ಳಿಗಳಲ್ಲಿ ಚಿತ್ರದ ಬ್ಯಾನರ್ ಗಳನ್ನು ಹಾಕಿ ಸಾರ್ವಜನಿಕರೇ ಪ್ರಚಾರ ನೀಡುತ್ತಿದ್ದಾರೆ. ಈ ನಡುವೆ ಪ್ರಮುಖ ಸಿನಿಮಾ ವಿತರಣಾ ಸಂಸ್ಥೆ “ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್” ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿರುವುದು ಚಿತ್ರದ ಯಶಸ್ವಿಗೆ ಇನ್ನಷ್ಟು ಸಹಕಾರಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw