ಪಬ್ ಜಿ ಪ್ರಭಾವ: ಕುಟುಂಬದವರನ್ನೇ ಹತ್ಯೆ ಮಾಡಿದ ಬಾಲಕ
ಲಾಹೋರ್: ಆನ್ ಲೈನ್ ಗೇಮ್ ಪಬ್ ಜಿ ಪ್ರಭಾವದಿಂದ 14 ವರ್ಷದ ಬಾಲಕನೊಬ್ಬ ಇಡೀ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
45 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್, ಅವರ 22 ವರ್ಷದ ಮಗ ತೈಮೂರ್ ಹಾಗೂ 17 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೃತದೇಹಗಳು ಕಳೆದ ವಾರ ಲಾಹೋರ್ ನ ಕನ್ಹಾ ಪ್ರದೇಶದಲ್ಲಿ ಪತ್ತೆಯಾಗಿದ್ದವು.
ನಹೀದ್ ಮುಬಾರಕ್ ಅವರ 14 ವರ್ಷದ ಪುತ್ರ ಮಾತ್ರ ಬದುಕಿದ್ದಾನೆ. ಆತನೇ ಕೊಲೆಗಾರ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.
ಪಬ್ ಜಿ ವ್ಯಸನಿಯಾಗಿದ್ದ ಬಾಲಕ ಆನ್ ಲೈನ್ ಗೇಮ್ ಪ್ರಭಾವದಿಂದ ತಾಯಿ ಮತ್ತು ಸಹೋದರ, ಸಹೋದರಿಯರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದಿನದ ಹೆಚ್ಚಿನ ಸಮಯವನ್ನು ಆನ್ ಲೈನ್ ಗೇಮ್ ನಲ್ಲಿ ಕಳೆಯುತ್ತಿದ್ದುದರಿಂದ ಆತನಲ್ಲಿ ಮಾನಸಿಕ ಸಮಸ್ಯೆ ಉಂಟಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಹೀದ್ ವಿವಾಹ ವಿಚ್ಛೇದನ ಪಡೆದ ಮಹಿಳೆಯಾಗಿದ್ದು, ಕಲಿಕೆಯ ಕಡೆ ಹೆಚ್ಚಿನ ಗಮನ ನೀಡದೆ ಪಬ್ ಜಿ ಆಡುತ್ತಾ ಸಮಯ ಕಳೆಯುವುದಕ್ಕಾಗಿ ಮಗನನ್ನು ಆಗಾಗ್ಗೆ ಗದರುತ್ತಿದ್ದರು. ಘಟನೆ ನಡೆದ ದಿನ ಕೂಡ ಮಗನನ್ನು ಗದರಿದ್ದರು. ಬಳಿಕ ಕವಾಟಿನಿಂದ ತಾಯಿಯ ಪಿಸ್ತೂಲ್ ಅನ್ನು ಕೈಗೆತ್ತಿಕೊಂಡಿದ್ದ ಬಾಲಕ ನಿದ್ರಿಸುತ್ತಿದ್ದ ವೇಳೆಯಲ್ಲಿ ಆಕೆಯನ್ನು ಹತ್ಯೆ ಮಾಡಿದ್ದಲ್ಲದೆ, ಸಹೋದರ-ಸಹೋದರಿಯರನ್ನೂ ಹತ್ಯೆ ಮಾಡಿದ್ದಾನೆ. ಮರುದಿನ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯಡಿಯೂರಪ್ಪನವರ ಮೊಮ್ಮಗಳ ಆತ್ಮಹತ್ಯೆಗೆ ಕಾರಣ ಏನು?
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ
ಭೀಕರ ಚಳಿಗೆ ನಾಲ್ವರು ಭಾರತೀಯರ ಸಾವು; ಗುರುತು ಪತ್ತೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ
ದೇಶದಲ್ಲಿ ಬುರ್ಖಾ ನಿಷೇಧಿಸಬೇಕು:ವಿವಾದಾತ್ಮಕ ಸ್ವಾಮೀಜಿ ರಿಷಿ ಕುಮಾರ್