ಪಡಿತರ ಚೀಟಿದಾರರಿಗೆ ಮತ್ತೊಂದು ಶಾಕಿಂಗ್ ನ್ಯೂಸ್!

padithara chiti
21/05/2021

ಬೆಂಗಳೂರು: ರಾಜ್ಯದ 87 ಲಕ್ಷ ರೇಷನ್ ಕಾರ್ಡ್ ಗಳಿಗೆ ಇನ್ನೂ ಪಡಿತರ ವಿತರಿಸಲಾಗಿಲ್ಲ. ವಿವಿಧ ಕಾರಣಗಳನ್ನು ಹೇಳಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಪಡಿತರ ವಿತರಣೆ ಮಾಡಿಲ್ಲ ಎಂದು ತಿಳಿದು ಬಂದಿದೆ.

ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ಸದಸ್ಯರಿಗೆ ಮೇ ಮತ್ತು ಜೂನ್ ತಿಂಗಳಲ್ಲಿ ತಲಾ ಐದು ಕೆ.ಜಿ. ಅಕ್ಕಿಯನ್ನು  ವಿತರಿಸುತ್ತಿದ್ದು, ಇದರೊಂದಿಗೆ ಅನ್ನ ಭಾಗ್ಯ ಯೋಜನೆಯಡಿ ಹೊಸ ವ್ಯವಸ್ಥೆಯಡಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ನಡುವೆ ಬಯೋಮೆಟ್ರಿಕ್, ಆಧಾರ್ ಓಟಿಪಿ, ಸರ್ವರ್ ಸಮಸ್ತೆ ಸೇರಿದಂತೆ ಹಲವು ಕಾರಣಗಳಿಂದಾಗಿ ಕೆಲವು ಜಿಲ್ಲೆಗಳಲ್ಲಿ ಪಡಿತರ ವಿತರಣೆಗೆ ವಿಳಂಬವಾಗಿದೆ ಎಂದು ವರದಿಯಾಗಿದೆ.

ಬಯೋಮೆಟ್ರಿಕ್ ಬದಲು ಮೊಬೈಲ್ ಓಟಿಪಿ ಮತ್ತು ಚೆಕ್ ಲಿಸ್ಟ್ ಮೂಲಕ ಪಡಿತರ ಹಂಚಿಕೆಗೆ ಅವಕಾಶ ನೀಡಬೇಕೆಂದು ರಾಜ್ಯ ಪಡಿತರ ವಿತರಕರ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಚೆಕ್ ಲಿಸ್ಟ್ ಮೂಲಕ ಪಡಿತರ ವಿತರಿಸಿದರೆ ಪಡಿತರ ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಬಯೋಮೆಟ್ರಿಕ್ ನಲ್ಲಿ ಹೆಬ್ಬೆಟ್ಟು ಗುರುತು ಮತ್ತು ಆಧಾರ್ ಓಟಿಪಿ ಮೂಲಕ ಹಂಚಿಕೆ ಮಾಡುವಂತೆ ತಿಳಿಸಲಾಗಿದೆ.

ಇದರಿಂದಾಗಿ ಮತ್ತೆ ಗೊಂದಲ ಮುಂದವರಿದಿದ್ದು, ಈಗಾಗಲೇ 60 ಲಕ್ಷ ಕಾರ್ಡುದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ. ಆದರೆ ಇನ್ನೂ 87 ಲಕ್ಷ ಕಾರ್ಡುಗಳಿಗೆ ಪಡಿತರ ವಿತರಿಸಬೇಕಿದೆ ಎಂದು ಹೇಳಲಾಗಿದೆ.

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version