ಬರಿಗಾಲಿನಲ್ಲೇ ನಡೆದು ಬಂದು ಪದ್ಮಶ್ರೀ ಪಡೆದುಕೊಂಡ ಹರೇಕಳ ಹಾಜಬ್ಬ | ಯಾರೀ ಅಕ್ಷರ ಸಂತ!? - Mahanayaka
7:24 AM Thursday 12 - December 2024

ಬರಿಗಾಲಿನಲ್ಲೇ ನಡೆದು ಬಂದು ಪದ್ಮಶ್ರೀ ಪಡೆದುಕೊಂಡ ಹರೇಕಳ ಹಾಜಬ್ಬ | ಯಾರೀ ಅಕ್ಷರ ಸಂತ!?

harekala hajabba
08/11/2021

ಅಕ್ಷರ ಸಂತ ಹರೇಕಳ ಹಾಜಬ್ಬನವರು ಇಂದು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರವನ್ನು ಪಡೆದಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಹಾಜಬ್ಬನವರು ಬರಿಗಾಲಿನಲ್ಲಿ ನಡೆದುಕೊಂಡು ಬಂದು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರಿದ್ದ ಸಭೆಯಲ್ಲಿ ಬರಿಗಾಲಿನಲ್ಲಿ ನಡೆದಾಡುತ್ತಾ ಬಂದ ಹಾಜಬ್ಬನವರ ಸರಳತೆ ಎಲ್ಲರ ಗಮನ ಸೆಳೆಯಿತು. ಕಿತ್ತಳೆ ಹಣ್ಣು ಮಾರಿ, ಅದರಿಂದ ಬಂದ ಹಣವನ್ನು ಕೂಡಿಟ್ಟು, ಸ್ವಂತ ಶಾಲೆಯೊಂದನ್ನು ನಿರ್ಮಿಸಿದ ಹಾಜಬ್ಬನವರು ನಿಜವಾಗಿಯೂ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ಕೇವಲ ತಮ್ಮ ಕಾರ್ಯಗಳು ಮಾತ್ರವಲ್ಲ, ತಮ್ಮ  ಸರಳತೆಯ ವ್ಯಕ್ತಿತ್ವದಿಂದಲೂ ಹಾಜಬ್ಬನವರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಹರೇಕಳ ಹಾಜಬ್ಬನವರಿಗೆ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಆದರೆ, ತನಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದಿದ್ದರೂ, ತನ್ನ ಹರೇಕಳ ಗ್ರಾಮದ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕು ಎಂದು ಆಲೋಚಿಸುವಷ್ಟು ವಿದ್ಯೆಯನ್ನು ತಮ್ಮ ಸಾಮಾಜಿಕ ಬದುಕಿನಲ್ಲಿಯೇ ಅವರು ಕಲಿತರು. ಹೀಗಾಗಿಯೇ ಅವರು ಕಿತ್ತಳೆ ಮಾರಿ ಬಂದ ಹಣವನ್ನು ಸ್ವಂತಕ್ಕೆ ಬಳಸದೇ ಅದರಿಂದ ಒಂದು ಶಾಲೆಯನ್ನೇ ನಿರ್ಮಿಸಿದರು. ಇದೀಗ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನೂ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಹಾಜಬ್ಬನವರಿಗೆ ಶುಭಾಶಯಗಳ ಸುರಿಮಳೆಯೇ ಸುರಿದಿದೆ. ವಿವಿಧ ಗಣ್ಯರು ಹರೇಕಳ ಹಾಜಬ್ಬನವರಿಗೆ ಟ್ವೀಟ್ ಮೂಲಕ ಅಭಿನಂದನೆಗಳನ್ನು ಸಲ್ಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ