ಅವಹೇಳನಕಾರಿ ಮೆಸೇಜ್: ಪಾಕಿಸ್ತಾನದಲ್ಲಿ ವಿದ್ಯಾರ್ಥಿಗೆ ಮರಣದಂಡನೆ - Mahanayaka
5:15 AM Friday 20 - September 2024

ಅವಹೇಳನಕಾರಿ ಮೆಸೇಜ್: ಪಾಕಿಸ್ತಾನದಲ್ಲಿ ವಿದ್ಯಾರ್ಥಿಗೆ ಮರಣದಂಡನೆ

09/03/2024

ಧರ್ಮ ಹಾಗೂ ದೇವರ ಬಗ್ಗೆ ಅವಹೇಳನಕಾರಿ ಸಂದೇಶವನ್ನು ವಾಟ್ಸಪ್‌ ಮೂಲಕ ಹಂಚಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮರಣದಂಡನೆ ವಿಧಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ವಿದ್ಯಾರ್ಥಿಯ ಈ ಕೃತ್ಯದ ಬಗ್ಗೆ ಪಾಕಿಸ್ತಾನದ ತನಿಖಾ ಸಂಸ್ಥೆಯಾದ ಪಾಕಿಸ್ತಾನಿಸ್‌ ಫೆಡರಲ್‌ ಇನ್ವೆಸ್ಟಿಗೇಷನ್‌ 2022 ರಲ್ಲಿ ದೂರು ದಾಖಲಿಸಿತ್ತು.

22 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಧರ್ಮದ ದೇವರು ಹಾಗೂ ಧಾರ್ಮಿಕ ವಿಷಯಗಳನ್ನು ಪ್ರಶ್ನಿಸಿದ್ದ. ಜೊತೆಗೆ ಪ್ರವಾದಿ ಮೊಹಮ್ಮದ್‌ ಹಾಗೂ ಅವರ ಪತ್ನಿಯರ ಬಗ್ಗೆ ವ್ಯಂಗ್ಯಚಿತ್ರಗಳನ್ನು ವಾಟ್ಸಪ್‌ ಮೂಲಕ ಹಂಚಿಕೊಂಡಿದ್ದ. ಇದೇ ಮಹಾಪರಾಧಕ್ಕಾಗಿ ವಿದ್ಯಾರ್ಥಿನಿಯನ್ನು ನೇಣಿಗಟ್ಟಲಾಗಿದೆ.

ಇದೇ ವೇಳೆ ಮತ್ತೊಬ್ಬ 17 ವರ್ಷದ ವಿದ್ಯಾರ್ಥಿಗೆ ಇದೇ ಆರೋಪದ ಮೇಲೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆತನ ವಯಸ್ಸನ್ನು ಪರಿಗಣಿಸಿ ಆತನಿಗೆ ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ