ಪ್ರೇಮಿಗಳಿಗೆ ಖುಷಿ: ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋದ ಅಂಜು ವೀಸಾ ಅವಧಿ ವಿಸ್ತರಿಸಿದ ಪಾಕ್ ಸರ್ಕಾರ
ಪಾಕಿಸ್ತಾನಕ್ಕೆ ಹೋಗಿ ತನ್ನ ಫೇಸ್‌ಬುಕ್ ಪ್ರಿಯತಮನನ್ನು ಮದುವೆಯಾಗಿದ್ದ ಭಾರತ ಮೂಲದ ವಿವಾಹಿತ ಮಹಿಳೆ ಅಂಜು ಅವರ ವೀಸಾ ಅವಧಿಯನ್ನು ಪಾಕಿಸ್ತಾನ ಸರ್ಕಾರ ಒಂದು ವರ್ಷ ವಿಸ್ತರಿಸಿದೆ.
ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ದೂರದ ಹಳ್ಳಿಗೆ ಪ್ರಯಾಣಿಸಿದ್ದ 34 ವರ್ಷದ ಇಬ್ಬರು ಮಕ್ಕಳ ತಾಯಿ ಅಂಜು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಇಸ್ಲಾಂಗೆ ಮತಾಂತರಗೊಂಡು ಬಳಿಕ ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದರು.
ಬಳಿಕ ತನ್ನ ಫೇಸ್ ಬುಕ್ ಪ್ರೇಮಿ 29 ವರ್ಷದ ನಸ್ರುಲ್ಲಾನನ್ನು ಜುಲೈ 25 ರಂದು ವಿವಾಹವಾಗಿದ್ದಳು. ಈ ನುಸ್ರುಲ್ಲಾ ಮನೆ ಪ್ರಾಂತ್ಯದ ಅಪ್ಪರ್ ದಿರ್ ಜಿಲ್ಲೆಯಲ್ಲಿದೆ. ಇದೀಗ ಭಾರತದ ಅಂಜು ವೀಸಾವನ್ನು ಪಾಕಿಸ್ತಾನ ಸರ್ಕಾರ ಒಂದು ವರ್ಷಗಳ ಕಾಲ ವಿಸ್ತರಿಸಿದೆ ಎಂದು ಆಕೆಯ ಪಾಕಿಸ್ತಾನದ ಪತಿ ನುಸ್ರುಲ್ಲಾ ಹೇಳಿದ್ದಾರೆ.
ಅಂಜು ಅವರ ವೀಸಾವನ್ನು ಮೊದಲು 2 ತಿಂಗಳವರೆಗೆ ವಿಸ್ತರಿಸಲಾಗಿತ್ತು. ಇದೀಗ ನಮ್ಮ ಮದುವೆಯ ನಂತರ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಆಕೆಯ ಮೂಲ ಒಂದು ತಿಂಗಳ ವೀಸಾ ಆಗಸ್ಟ್ 20 ರಂದು ಮುಕ್ತಾಯಗೊಳ್ಳಲಿದೆ. ಆಂತರಿಕ ಸಚಿವಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ ನಂತರ ನನ್ನ ಪತ್ನಿ ಅಂಜು ಅವರ ವೀಸಾವನ್ನು ಒಂದು ವರ್ಷದವರೆಗೆ ವಿಸ್ತರಿಸಿದೆ. ಪಾಕಿಸ್ತಾನದ ಎಲ್ಲಾ ಸಂಸ್ಥೆಗಳು ನಮ್ಮೊಂದಿಗೆ ಸಹಕರಿಸುತ್ತಿವೆ ಎಂದು ನುಸ್ರುಲ್ಲಾ ಹೇಳಿದ್ದಾರೆ.
ಅಂಜು ರಾಜಸ್ಥಾನದಲ್ಲಿರುವ ಅರವಿಂದ್ ಅವರನ್ನು ಮದುವೆಯಾಗಿದ್ದರು. ಅವರಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ. ಅಂಜು ಮತ್ತು ನುಸ್ರುಲ್ಲಾ ಇಬ್ಬರು 2019 ರಲ್ಲಿ ಫೇಸ್ ಬುಕ್ ನಲ್ಲಿ ಸ್ನೇಹಿತರಾಗಿದ್ದರು. ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಅಂಜು, ಭಾರತದಿಂದ ವಾಘಾ-ಅಟ್ಟಾರಿ ಗಡಿಯ ಮೂಲಕ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw