ಸಿಂಧಿ ಭಾಷೆ ಬಗ್ಗೆ ಹೇಳಿಕೆ: ಕ್ಷಮೆಯಾಚಿಸಿದ ನಟ ನಾಸಿರುದ್ದೀನ್ ಶಾ
ಹಿರಿಯ ನಟ ನಾಸಿರುದ್ದೀನ್ ಶಾ ಅವರು ಪಾಕಿಸ್ತಾನದಲ್ಲಿ ಇನ್ಮುಂದೆ ಸಿಂಧಿ ಭಾಷೆಯನ್ನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಈ ಹೇಳಿಕೆಯು ಪಾಕಿಸ್ತಾನದ ಅನೇಕ ಸೆಲೆಬ್ರಿಟಿಗಳು ಸೇರಿದಂತೆ ಸಿಂಧಿ ಭಾಷಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಟ ನಾಸಿರುದ್ದೀನ್ ಶಾ ಅವರು ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ನಾಸಿರುದ್ದೀನ್ ಶಾ ಅವರು, ಸಿಂಧಿ ಮತ್ತು ಮರಾಠಿ ಭಾಷೆಗಳ ಬಗ್ಗೆ ತಮ್ಮ ಹೇಳಿಕೆಗಳು ‘ಸಂಪೂರ್ಣವಾಗಿ ಅನಗತ್ಯ ವಿವಾದಗಳಿಗೆ’ ಕಾರಣವಾಗಿವೆ ಎಂದು ಹೇಳಿದ್ದಾರೆ.
ಇದೀಗ ಅನಗತ್ಯವಾಗಿ ಎರಡು ವಿವಾದಗಳು ಭುಗಿಲೆದ್ದಂತೆ ತೋರುತ್ತದೆ ಎಂದ ಅವರು, ಮರಾಠಿ ಮತ್ತು ಪಾರ್ಸಿ ಭಾಷೆಗಳ ನಡುವಿನ ಸಂಬಂಧದ ಬಗ್ಗೆ ತಮ್ಮ ಹೇಳಿಕೆಗಳನ್ನು ಸ್ಪಷ್ಟಪಡಿಸಿದ ಅವರು, ‘ಅನೇಕ ಮರಾಠಿ ಪದಗಳು ಪಾರ್ಸಿ ಮೂಲದವು. ನನ್ನ ಉದ್ದೇಶ ಮರಾಠಿ ಭಾಷೆಯನ್ನು ಹತ್ತಿಕ್ಕುವುದು ಅಲ್ಲ.
ಆದರೆ ಅದರ ವೈವಿಧ್ಯತೆಯು ಎಲ್ಲಾ ಭಾಷಾ ಸಂಸ್ಕೃತಿಗಳನ್ನು ಹೇಗೆ ಶ್ರೀಮಂತಗೊಳಿಸುತ್ತದೆ ಎಂಬುದರ ಬಗ್ಗೆ ಮಾತನಾಡುವುದು ಆಗಿತ್ತು ಎಂದಿದ್ದಾರೆ.
ಉರ್ದು ಸ್ವತಃ ಹಿಂದಿ, ಪಾರ್ಸಿ, ಟರ್ಕಿಶ್ ಮತ್ತು ಅರೇಬಿಕ್ ಭಾಷೆಯ ಮಿಶ್ರಣವಾಗಿದೆ. ಇಂಗ್ಲಿಷ್ ಎಲ್ಲಾ ಯುರೋಪಿಯನ್ ಭಾಷೆಗಳಿಂದ ಪದಗಳನ್ನು ಎರವಲು ಪಡೆದಿದೆ ಎಂದಿದ್ದಾರೆ.
ಇನ್ನು ಪಾಕಿಸ್ತಾನದ ನಟ ಅದ್ನಾನ್ ಸಿದ್ದಿಕಿ ಅವರು ನಾಸಿರುದ್ದೀನ್ ಶಾ ಅವರು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw