ಜಮ್ಮು ಗಡಿಯಲ್ಲಿ ಪಾಕ್ ನ ವಿಮಾನ ಆಕಾರದ ಬಲೂನ್ ಪ್ರತ್ಯಕ್ಷ: ತೀವ್ರ ಶೋಧ
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಲೋಗೋ ಇರುವ ವಿಮಾನ ಆಕಾರದ ನಿಗೂಢ ಬಲೂನ್ ವೊಂದು ಪತ್ತೆಯಾಗಿದೆ.
ಕಥುವಾ ಜಿಲ್ಲೆ ಹೀರಾನಗರದ ಬಳಿ ಬಿದ್ದಿರುವ ಕಪ್ಪು-ಬಿಳಿ ಬಣ್ಣದ ನಿಗೂಢ ಬಲೂನನ್ನು ಬಿಎಸ್ಎಫ್ ಯೋಧರು ವಶಪಡಿಸಿಕೊಂಡು ಇದರ ಮೂಲವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯಾಗಿ 2023ರ ಫೆಬ್ರವರಿಯಲ್ಲಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಲೋಗೋ ವಿಮಾನ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದ ಸೇಬಿನ ತೋಟದಲ್ಲಿ ಪತ್ತೆಯಾಗಿತ್ತು. ಈ ಮೂಲಕ ಇದೀಗ ಮತ್ತೆ ಎರಡನೇ ಬಾರಿಗೆ ಪತ್ತೆಯಾಗಿದೆ.
ಮೇ 20 ರಂದು ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ಅನ್ನು ಸೇನೆ ಹೊಡೆದುರುಳಿಸಿತ್ತು. ಈ ವೇಳೆ ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ತಿಳಿಸಿದ್ದರು. ಇದರ ಹಿಂದಿನ ದಿನ, ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಮೂರು ಪಾಕಿಸ್ತಾನಿ ಡ್ರೋನ್‌ಗಳನ್ನು ಬಿಎಸ್ಎಫ್ ಹೊಡೆದುರುಳಿಸಿತ್ತು. ಇದೀಗ ಸಿಕ್ಕಿರುವ ನಿಗೂಢ ಬಲೂನ್ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw