ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ - Mahanayaka
5:39 PM Monday 15 - September 2025

ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ

jds mla gowrishankar
08/09/2021

ತುಮಕೂರು: ಮುಂದಿನ ಬಾರಿ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ದಲಿತರೇ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂದು  ಜೆಡಿಎಸ್ ಪಕ್ಷದ ಶಾಸಕ ಗೌರಿಶಂಕರ್ ಕರೆ ನೀಡಿದ್ದು, ದಲಿತ ಸಿಎಂ ಚರ್ಚೆಗೆ ಮತ್ತೆ ನಾಂದಿ ಹಾಡಿದ್ದಾರೆ.


Provided by

ತುಮಕೂರಿನಲ್ಲಿ ಮನಡೆದ ಛಲವಾದಿ, ಆದಿ ಜಾಂಬವ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಛಲವಾದಿ, ಆದಿ ಜಾಂಬವ ಸಮುದಾಯದಲ್ಲಿ ಒಗ್ಗಟ್ಟಿರುತ್ತಿದ್ದರೆ, ಡಾ.ಜಿ.ಪರಮೇಶ್ವರ್ ಕಳೆದ ಬಾರಿಯೇ ಮುಖ್ಯಮಂತ್ರಿಯಾಗುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ, ರಾಜ್ಯದಲ್ಲಿ ಒಬ್ಬ ದಲಿತ ಸಿಎಂ ಆಗಬೇಕು ಎಂದು ಅವರು ಹೇಳಿದರು ಎಂದು ವರದಿಯಾಗಿದೆ.

ದಲಿತ ಸಿಎಂ ಚರ್ಚೆ ಇದೀಗ ಮತ್ತೆ ಆರಂಭವಾಗಿದೆ. ಈ ಹಿಂದೆಯಷ್ಟೇ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಈ ಹೇಳಿಕೆ ನೀಡಿ ಚರ್ಚೆಯನ್ನು ಹುಟ್ಟು ಹಾಕಿದ್ದರು. ಇದೀಗ ದಲಿತ ಸಿಎಂ ಚರ್ಚೆ ಮತ್ತೆ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಕೂಡ ದಲಿತ ಸಮುದಾಯದ ಮತಗಳ ಬಗ್ಗೆ ಕಣ್ಣಿಟ್ಟಿದ್ದು, ಈ ಹಿನ್ನೆಲೆಯಲ್ಲಿ ದಲಿತ ಸಿಎಂ ಚರ್ಚೆಗಳು ಮತ್ತೆ ಮತ್ತೆ ನಡೆಯುತ್ತಿದೆ ಎನ್ನಲಾಗಿದೆ.

ಇನ್ನಷ್ಟು ಸುದ್ದಿಗಳು…

ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು!

ಲಿಫ್ಟ್ ನೀಡುವ ನೆಪದಲ್ಲಿ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ!

ಹೆದ್ದಾರಿಯ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಕಾಂಡಮ್ ಪತ್ತೆ | ಅಷ್ಟಕ್ಕೂ ನಡೆದದ್ದೇನು?

ಜಾತ್ಯತೀತ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗುತ್ತಿದೆ | ಅಸಾದುದ್ದೀನ್ ಓವೈಸಿ ಆಕ್ರೋಶ

ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ನಾನು ಹೇಳಿಲ್ಲ | ಉಲ್ಟಾ ಹೊಡೆದ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ!

ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳ ಹೆಸರು ಪ್ರಕಟಿಸಿದ ಬಿಜೆಪಿ: ಶೋಭಾ ಕರಂದ್ಲಾಜೆಗೂ ಸ್ಥಾನ

ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್

ಇತ್ತೀಚಿನ ಸುದ್ದಿ