ಫೆಲೆಸ್ತೀನ್ ವಿಚಾರ: ಗಲ್ಫ್ ರಾಷ್ಟ್ರಗಳ ನಾಯಕರ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಫೆಲೆಸ್ತೀನ್ ವಿಷಯದಲ್ಲಿ ಗಲ್ಫ್ ರಾಷ್ಟ್ರಗಳು ಗಂಭೀರವಾಗಿ ಆಲೋಚಿಸುತ್ತಿರುವ ಸೂಚನೆ ಲಭ್ಯವಾಗಿದೆ. ಇದಕ್ಕೆ ಆಧಾರವಾಗಿ ಸೌದಿಯಲ್ಲಿ ನಡೆಯುತ್ತಿರುವ ಗಲ್ಫ್ ರಾಷ್ಟ್ರಗಳ ನಾಯಕರ ಸಭೆಯನ್ನು ಎತ್ತಿಕೊಳ್ಳಬಹುದಾಗಿದೆ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದಂತೆ ಜೋರ್ಡಾನ್, ಈಜಿಪ್ಟ್ ಮತ್ತು ಜಿಸಿಸಿ ರಾಷ್ಟ್ರಗಳ ನಾಯಕರು ಸೌದಿ ಅರೇಬಿಯಾದಲ್ಲಿ ಒಂದುಗೂಡಿದ್ದಾರೆ.
ಫೆಲೆಸ್ತೀನ್ ರಾಷ್ಟ್ರದ ಕುರಿತಂತೆ ಒಟ್ಟಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ.
ಮುಖ್ಯವಾಗಿ ಮಾರ್ಚ್ ನಾಲ್ಕರಂದು ಕೈರೋದಲ್ಲಿ ನಡೆಯಲಿರುವ ಅರಬ್ ರಾಷ್ಟ್ರಗಳ ಶೃಂಗ ಸಭೆಯ ಕುರಿತಂತೆ ಚರ್ಚೆಗಳು ನಡೆದಿವೆ.
ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಮಂತ್ರಣದಂತೆ ಜೋರ್ಡಾನ್ ಮತ್ತು ಜಿಸಿಸಿ ರಾಷ್ಟ್ರಗಳ ಮುಖಂಡರು ರಿಯಾದಿನಲ್ಲಿ ಸೇರಿದ್ದಾರೆ. ಕುವೈತ್ ಅಮೀರ್, ಕಥರ್ ಅಮೀರ್, ಯು ಏ ಇ ಅಧ್ಯಕ್ಷರು, ಬಹರೇನ್ ರಾಜಕುಮಾರ, ಈಜಿಪ್ಟ್ ಅಧ್ಯಕ್ಷಮತ್ತು ಜೋರ್ಡಾನ್ ದೊರೆ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj