ಫೆಲೆಸ್ತೀನಿಯರಿಗೆ ಇಸ್ರೇಲ್ ಪ್ರವೇಶ ನಿಷೇಧ: ಇಸ್ರೇಲ್ ಗೆ ಪ್ರವೇಶಿಸಿದ ಭಾರತೀಯ ಕಾರ್ಮಿಕರು - Mahanayaka

ಫೆಲೆಸ್ತೀನಿಯರಿಗೆ ಇಸ್ರೇಲ್ ಪ್ರವೇಶ ನಿಷೇಧ: ಇಸ್ರೇಲ್ ಗೆ ಪ್ರವೇಶಿಸಿದ ಭಾರತೀಯ ಕಾರ್ಮಿಕರು

30/12/2024

ಅಕ್ಟೋಬರ್ 7, 2023 ಅನಂತರ, ಫೆಲೆಸ್ತೀನ್ ನಿರ್ಮಾಣ ಕಾರ್ಮಿಕರಿಗೆ ಇಸ್ರೇಲ್ ಪ್ರವೇಶದ ಮೇಲೆ ನಿಷೇಧ ಹೇರಲಾಗಿದ್ದು, ಅವರ ಬದಲಿಗೆ ಇದೀಗ ಭಾರತೀಯ ನಿರ್ಮಾಣ ಕಾರ್ಮಿಕರು ಇಸ್ರೇಲ್ ಪ್ರವೇಶಿಸಿದ್ದಾರೆ. ಇಸ್ರೇಲ್ ನಲ್ಲಿ ಗಳಿಕೆ ಅತ್ಯಧಿಕವಾಗಿದ್ದು, ತಮ್ಮ ತವರಿಗಿಂತ ಮೂರು ಪಟ್ಟು ವೇತನ ದೊರೆಯುವ ಈ ಜಾಗಕ್ಕೆ ಸಾವಿರಾರು ಕಿಮೀ ದೂರದಿಂದ ಯಾಕೆ ಬರುತ್ತಿದ್ದಾರೆ ಎಂಬುದನ್ನು ತಿಳಿಸುತ್ತಿದೆ.
ಇಸ್ರೇಲ್ ಪ್ರವೇಶದಿಂದ ನಿಷೇಧಕ್ಕೊಳಗಾಗಿರುವ ಲಕ್ಷಾಂತರ ಫೆಲೆಸ್ತೀನಿಯನ್ನರ ಜಾಗವನ್ನು ತುಂಬುವ ಇಸ್ರೇಲ್ ಸರಕಾರದ ಪ್ರಯತ್ನದ ಭಾಗವಾಗಿ ಭಾರತೀಯ ಕಾರ್ಮಿಕರು ಅಲ್ಲಿದ್ದಾರೆ.

ಕಳೆದ ವರ್ಷದಿಂದ ಇಸ್ರೇಲ್ ಗೆ ಬಂದಿರುವ 16,000 ಭಾರತೀಯ ಕಾರ್ಮಿಕರ ಪೈಕಿ ಹಲವು ಅಲ್ಲಿಯ ಕಾರ್ಯ ಶೈಲಿಗೆ ಇನ್ನೂ ಹೊಂದಿಕೊಂಡಂತೆ ಕಾಣುತ್ತಿಲ್ಲ. ಇದರ ಹೊರತಾಗಿಯೂ ಸಾವಿರಾರು ಭಾರತೀಯ ಕಾರ್ಮಿಕರನ್ನು ಕರೆ ತರುವ ಯೋಜನೆಯಲ್ಲಿ ಇಸ್ರೇಲ್ ಇದೆ.
ಹಲವಾರು ದಶಕಗಳಿಂದ ಭಾರತೀಯರು ಇಸ್ರೇಲ್ ನಲ್ಲಿ ಉದ್ಯೋಗಸ್ಥರಾಗಿದ್ದು, ಸಾವಿರಾರು ಆರೈಕೆದಾರರು ವಯಸ್ಸಾದ ಇಸ್ರೇಲ್ ಪ್ರಜೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ, ವಜ್ರೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ವೃತ್ತಿಗಳಲ್ಲೂ ಭಾರತೀಯರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇಸ್ರೇಲ್ ನಿರ್ಮಾಣ ವಲಯಕ್ಕೂ ಭಾರತೀಯ ನಿರ್ಮಾಣ ಕಾರ್ಮಿಕರನ್ನು ಕರೆತರಲು ಉದ್ಯೋಗ ನೇಮಕಾತಿದಾರರು ಅಭಿಯಾನವೊಂದನ್ನು ಹಮ್ಮಿಕೊಂಡಿದ್ದಾರೆ.
ಹಮಾಸ್ ದಾಳಿಗೂ ಮುನ್ನ, ಸುಮಾರು 26,000 ವಿದೇಶಿ ಕಾರ್ಮಿಕರೊಂದಿಗೆ ಸುಮಾರು 80,000 ಫೆಲೆಸ್ತೀನಿಯನ್ನರು ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಇಸ್ರೇಲ್ ನ ಕೇಂದ್ರೀಯ ಬ್ಯಾಂಕ್ ನ ಎಯಾಲ್ ಅರ್ಗೋವ್ ಹೇಳುತ್ತಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ