ಮಹಾನಗರ ಪಾಲಿಕೆ ಆಯುಕ್ತರ ಮನೆಯ ಮುಂದೆ ಟ್ರ್ಯಾಕ್ಟರ್ ನಲ್ಲಿ ಕಸ ತಂದು ಸುರಿದ ಶಾಸಕ! - Mahanayaka

ಮಹಾನಗರ ಪಾಲಿಕೆ ಆಯುಕ್ತರ ಮನೆಯ ಮುಂದೆ ಟ್ರ್ಯಾಕ್ಟರ್ ನಲ್ಲಿ ಕಸ ತಂದು ಸುರಿದ ಶಾಸಕ!

abhaya pateel
25/07/2021

ಬೆಳಗಾವಿ:  ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಆಕ್ರೋಶಗೊಂಡ  ಕ್ಷೇತ್ರದ ಶಾಸಕ ಅಭಯ ಪಾಟೀಲ್, ಮಹಾನಗರ ಪಾಲಿಕೆ ಆಯುಕ್ತ ಮನೆಯ ಮುಂದೆ ಕಸವನ್ನು ಸುರಿದು ಪ್ರತಿಭಟಿಸಿರುವ ಘಟನೆ ನಡೆದಿದೆ.


Provided by

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರ ನಿವಾಸದ ಮುಂದೆ ಬೆಳಗ್ಗಿನ ಜಾವ ಟ್ರ್ಯಾಕ್ಟರ್ ನಲ್ಲಿ ಕಸ ತಂದು ಸುರಿದು ಗೇಟ್ ತುಂಬಾ ಹರಡಿ ಸ್ಥಳದಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.

ತಮ್ಮ ತಂಡದೊಂದಿಗೆ ಹೋಗಿ ಟ್ರ್ಯಾಕ್ಟರ್ ನಲ್ಲಿ ಕಸವನ್ನು ತುಂಬಿಕೊಂಡು ಬಂದ ಶಾಸಕರು, ತಾವೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದು, ಪಾಲಿಕೆ ಆಯುಕ್ತರ ಮನೆಯ ಮುಂದಿನ ಗೇಟ್ ಬಳಿಯಲ್ಲಿ ಕಸವನ್ನು ಸುರಿಯುವ ಮೂಲಕ ಕ್ಷೇತ್ರದಲ್ಲಿ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕೇರಳದಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಮಳೆ: ಅಲ್ಪ ಸಮಯದಲ್ಲಿ ತೀವ್ರ ಹಾನಿ ಮಾಡುತ್ತಿದೆ ಸುಳಿಗಾಳಿ ಸಹಿತ ಮಳೆ

ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಬುಡಕಟ್ಟು ಮಹಿಳೆಯ ಶಿರಚ್ಛೇದನ!

ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು

ಭಾರೀ ಮಳೆಗೆ 138 ಮಂದಿ ಸಾವು, 89 ಮಂದಿಗೆ ಗಂಭೀರ ಗಾಯ ನಾಪತ್ತೆಯಾದವರೆಷ್ಟು ಗೊತ್ತಾ?

ಇತ್ತೀಚಿನ ಸುದ್ದಿ