ಪಾಳು ಬಿದ್ದ ಮನೆಯಲ್ಲಿ ಸೇರಿಕೊಂಡಿದ್ದ ಚಿರತೆ ಸೆರೆ: ಅಧಿಕಾರಿಗಳ ಕಾರ್ಯಾಚರಣೆ ಹೇಗಿತ್ತು?
ಹಿರಿಯಡ್ಕ: ಹಿರಿಯಡ್ಕದ ಕಾಲೇಜು ಸಮೀಪದ ಹಾಡಿಯಲ್ಲಿರುವ ಪಾಳುಬಿದ್ದ ಮನೆಯೊಂದರ ಒಳಗೆ ಸೇರಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ತಂಡ ಯಶಸ್ವಿಯಾಗಿದೆ.
ಮಾಜಿ ಜಿಪಂ ಸದಸ್ಯೆ ಚಂದ್ರಿಕಾ ರಂಜನ್ ಕೇಳ್ಕಾರ್ ಎಂಬವರ ಪಾಳು ಬಿದ್ದ ಮನೆಯೊಳಗೆ ಕಳೆದ ನಾಲ್ಕೈದು ದಿನ ಹಿಂದೆ ಚಿರತೆಯೊಂದು ಸೇರಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಬುಧವಾರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಸಿದ್ಧತೆ ನಡೆಸಿದರು. ಕಾರ್ಕಳದಿಂದ ಗನ್ ತರಿಸಿ, ಮಂಗಳೂರಿನಿಂದ ಅರಿವಳಿಕೆ ಮದ್ದು ಮತ್ತು ವೈದ್ಯರನ್ನು ಕರೆಯಿಸಲಾಯಿತು. ಸಂಜೆ ವೇಳೆ ಮನೆಯ ಹಂಚಿನ ಮೂಲಕ ಚಿರತೆ ಒಳಗೆ ಇರುವುದು ಖಚಿತ ಪಡಿಸಿಕೊಂಡ ಇಲಾಖಾ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದರು.
ಬಳಿಕ ಗನ್ ಮೂಲಕ ಚಿರತೆಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಲಾಯಿತು. ಇದನ್ನು ಖಚಿತ ಪಡಿಸಿಕೊಂಡ ತಂಡ, ಮನೆಯೊಳಗೆ ಪ್ರವೇಶಿಸಿ ಚಿರತೆಯನ್ನು ರಕ್ಷಿಸಿದೆ ಎಂದು ತಿಳಿದುಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka