ಪಾನ್‌-ಆಧಾರ್ ಲಿಂಕ್: ಮಾರ್ಚ್ 31ಕೊನೆ ದಿನಾಂಕ - Mahanayaka
10:08 PM Thursday 14 - November 2024

ಪಾನ್‌-ಆಧಾರ್ ಲಿಂಕ್: ಮಾರ್ಚ್ 31ಕೊನೆ ದಿನಾಂಕ

pan card aadhar card
21/03/2022

ಪಾನ್‌ ಕಾರ್ಡ್‌ ಹೊಂದಿರುವವರು ಆಧಾರ್‌ ಕಾರ್ಡ್‌ ಜತೆ ಲಿಂಕ್‌ ಮಾಡಲು ಈ ತಿಂಗಳ ಕೊನೆಯವರೆಗೆ ಗಡುವು ನೀಡಲಾಗಿದೆ. ಮಾರ್ಚ್‌ 31ರೊಳಗೆ ಪಾನ್‌-ಆಧಾರ್‌ ಲಿಂಕ್‌ ಮಾಡದಿದ್ದರೆ ಪಾನ್‌ ಕಾರ್ಡ್‌ ಹೊಂದಿದವರು ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ .

ನಿಗದಿತ ದಿನಾಂಕದೊಳಗೆ ಪಾನ್‌-ಆಧಾರ್‌ ಲಿಂಕ್‌ ಮಾಡದಿದ್ದರೆ ಪಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಆಗುವುದಿಲ್ಲ. ಡೆಡ್‌ ಲೈನ್‌ ಮಿಸ್‌ ಆದರೆ ಆದಾಯ ತೆರಿಗೆ ಕಾಯ್ದೆ-1961ರ ಅಡಿಯಲ್ಲಿ 10 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಡೆಡ್‌ ಲೈನ್‌ ಬಳಿಕ ಲಿಂಕ್‌ ಮಾಡಿದರು ಕೂಡ ಒಂದು ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ .

ಆದಾಯ ತೆರಿಗೆ ವಂಚನೆ ತಪ್ಪಿಸಲು ಹಾಗೂ ಒಬ್ಬರೇ ಹಲವು ಪಾನ್‌ ಕಾರ್ಡ್‌ಗಳನ್ನು ಪಡೆಯುವುದನ್ನು ನಿಲ್ಲಿಸಲು 2017ರಲ್ಲಿಯೇ ಕೇಂದ್ರ ಸರಕಾರವು ಪಾನ್‌-ಆಧಾರ್‌ ಲಿಂಕ್‌ ಮಾಡುವುದನ್ನು ಕಡ್ಡಾಯ ಗೊಳಿಸಲಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಜೋಡಣೆಯ ಗಡುವನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಆದರೆ, ಈ ಬಾರಿ ದಿನಾಂಕ ವಿಸ್ತರಣೆ ಮಾಡುವ ಯಾವುದೇ ಸಾಧ್ಯತೆ ಇಲ್ಲದಿರುವುದರಿಂದ ಪಾನ್‌ ಕಾರ್ಡ್‌ ಹೊಂದಿದವರು ಆನ್‌ ಲೈನ್‌ನಲ್ಲಿಯೇ ಪಾನ್‌-ಆಧಾರ್‌ ಲಿಂಕ್‌ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಉಂಟಾಗುವ ತೊಂದರೆಗಳಿಂದ ಮುಕ್ತವಾಗಿರಿ ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫುಟ್ಬಾಲ್ ಗ್ಯಾಲರಿ ಕುಸಿತ -200ಕ್ಕೂ ಹೆಚ್ಚು ಮಂದಿಗೆ ಗಾಯ

ಕ್ರಿಶ್ಚಿಯನ್ ಪಾದ್ರಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ

ರಾಜ್ಯದಲ್ಲಿ ಇನ್ನೂ ಮುಂದುವರಿಯಲಿದೆ ಬೇಸಿಗೆ ಮಳೆ!

ಆಟೋಗೆ ಬಣ್ಣ ತುಂಬಿದ ಬಲೂನ್ ಎಸೆದ ಕಿಡಿಗೇಡಿ: ರಸ್ತೆಯಲ್ಲಿ ಮಗುಚಿ ಬಿದ್ದ ಆಟೋ | ವಿಡಿಯೋ ವೈರಲ್

ವಿಶ್ವದ ಅತ್ಯಂತ ಸಂತೋಷದ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಬಿಜೆಪಿಯಿಂದ ‘ದಿ ಕಾಶ್ಮೀರ್ ಫೈಲ್ಸ್ ‘ ಪ್ರಚಾರ ಮಾಡಿ ಗುಜರಾತ್, ರಾಜಸ್ಥಾನ್ ಚುನಾವಣೆ ಗೆಲ್ಲುವ ತಂತ್ರಗಾರಿಕೆ: ಶಿವಸೇನಾ ಮುಖಂಡ ಸಂಜಯ್ ರಾವತ್

ಇತ್ತೀಚಿನ ಸುದ್ದಿ