ಮಂಗಳೂರಿನ ಬೀಚ್ ನಲ್ಲಿ ನೀರುಪಾಲಾಗಿ ಮೈಸೂರಿನ ಇಬ್ಬರು ಸಾವು - Mahanayaka

ಮಂಗಳೂರಿನ ಬೀಚ್ ನಲ್ಲಿ ನೀರುಪಾಲಾಗಿ ಮೈಸೂರಿನ ಇಬ್ಬರು ಸಾವು

panamburu beach
30/05/2022

ಮಂಗಳೂರು: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರದ ಅಲೆಗೆ ಸಿಕ್ಕಿ ನೀರುಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನಡೆದಿದೆ.

ದಿವಾಕರ್ ಆರಾಧ್ಯ (45), ನಿಂಗಪ್ಪ (60) ಮೃಪಟ್ಟವರಾಗಿದ್ದು, ಇವರು ಮೈಸೂರು ನಿವಾಸಿಗಳಾಗಿದ್ದು, ಮಂಗಳೂರಿನಲ್ಲಿ ನಡೆಯುತ್ತಿದ್ದ ಹಲಸಿನ ಮೇಳಕ್ಕೆ ಶುಕ್ರವಾರ ಸಂಜೆ ಆಗಮಿಸಿದ್ದರು ಎನ್ನಲಾಗಿದೆ.

ಸೋಮವಾರ ಬೆಳಗ್ಗೆ 7:30 ವೇಳೆಗೆ ಪಣಂಬೂರು ಬೀಚ್ ಗೆ ವಿಹಾರಕ್ಕೆ ಇಳಿದಿದ್ದು, ಸಮುದ್ರದ ಅಲೆಗಳಿಂದ ಉಂಟಾಗಬಹುದಾದ ಅಪಾಯದ ಅರಿವಿಲ್ಲದೇ ನೀರಿಗಿಳಿದಿದ್ದಾರೆ. ಈ ವೇಳೆ ನೀರಿನ ಅಲೆಗೆ ಸಿಲುಕಿ ನೀರುಪಾಲಾಗಿದ್ದಾರೆ.

ಇಬ್ಬರ ಮೃತದೇಹವೂ ಪತ್ತೆಯಾಗಿದ್ದು,  ಘಟನೆ ಸಂಬಂಧ ಅವಿನಾಶ್ ಎಂಬವರು ನೀಡಿರುವ ದೂರಿನಂತೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬದಾಮ್  ಸೇವನೆ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉತ್ತಮ

ಟ್ಯೂಮೋಕ್‌ ಆ್ಯಪ್‌ ಮೂಲಕ ಜೂನ್‌ ತಿಂಗಳ ಬಿಎಂಟಿಸಿ ಮಾಸಿಕ ಪಾಸ್‌ ಬುಕ್‌ ಮಾಡಿ

ದೇಶದಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆ, ಗಲಾಟೆಗೆ ಆರೆಸ್ಸೆಸ್ ಕಾರಣ: ಶಾಸಕ ಅಮರೇಗೌಡ ಬಯ್ಯಾಪುರ

ಮಹಿಳೆಯರು ರಾತ್ರಿ ಪಾಳಿಯಲ್ಲಿ  ಕೆಲಸ ಮಾಡುವಂತಿಲ್ಲ: ಯೋಗಿ ಸರ್ಕಾರದಿಂದ ಖಡಕ್ ಆದೇಶ

ಇತ್ತೀಚಿನ ಸುದ್ದಿ