ಪಂಚರಾಜ್ಯ ಚುನಾವಣೆ: ಇವಿಎಂ ಹ್ಯಾಕ್ ಆಗಿರಬಹುದು; ಡಾ.ಜಿ.ಪರಮೇಶ್ವರ್ - Mahanayaka
12:04 PM Thursday 12 - December 2024

ಪಂಚರಾಜ್ಯ ಚುನಾವಣೆ: ಇವಿಎಂ ಹ್ಯಾಕ್ ಆಗಿರಬಹುದು; ಡಾ.ಜಿ.ಪರಮೇಶ್ವರ್

parameshwer
12/03/2022

ತುಮಕೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಹಿನ್ನಡೆಗೆ ಕಾರಣವನ್ನು ನಿರಾಸೆಯಲ್ಲಿ ಹುಡುಕಿಕೊಳ್ಳಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವಿಎಂ ಬಗ್ಗೆ ನನಗೆ ಅನುಮಾನ ಈಗಲೂ ಇದೆ. ಇವಿಎಂ ಅನ್ನು ಮ್ಯಾನುಪ್ಲೆಟ್ ಮಾಡುವ ಟೆಕ್ನಾಲಜಿಯನ್ನು ಅವರು ಇಟ್ಟುಕೊಂಡಿದ್ದಾರೆ. ನನಗೂ ಕೂಡ ಅನೇಕ ಬಾರಿ ಆ ರೀತಿ ಅನಿಸಿದೆ. ತಂತ್ರಜ್ಞರು ಹೇಳಿಕೆ ನೋಡಿದರೆ ಇವಿಎಂ ಹ್ಯಾಕ್ ಆಗಿರಬಹುದು ಅನಿಸುತ್ತದೆ ಎಂದರು.

ನಾವು ಅದನ್ನು ಕೇವಲ ಆರೋಪ ಅಷ್ಟೇ ಮಾಡಬಹುದು, ಸ್ಪಷ್ಟವಾಗಿ ನಮಗೂ ಗೊತ್ತಿಲ್ಲ. ಉತ್ತರ ಪ್ರದೇಶದಲ್ಲೂ ಹ್ಯಾಕ್ ಆಗಿರಬಹುದು. ಉತ್ತರ ಪ್ರದೇಶ 80 ಲೋಕಸಭಾ ಸದಸ್ಯರಿರುವ ರಾಜ್ಯ. ಹಾಗಾಗಿ ಆ ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಸಂಸತ್ ಚುನಾವಣೆ ಸುಲಭವಾಗುತ್ತದೆ ಎನ್ನುತ್ತಾರೆ. ಹಾಗಾಗಿ ಅಲ್ಲಿ ಕೂಡ ಯಾಕೆ ಹ್ಯಾಕ್ ಮಾಡಿರಬಾರದು ಎಂಬ ಪ್ರಶ್ನೆನೂ ಬರುತ್ತದೆ ಎಂದು ಶಂಕೆ ವ್ಯಕ್ತಪಡಿಸಿದರು.

ದೇಶದಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗುತ್ತಿದೆ ಎಂಬ ವಾತಾವರಣ ಇದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿದೆ. ಇಂತಹ ಆಡಳಿತ ವಿರೋಧಿ ಸಂದರ್ಭದಲ್ಲೂ ಜನರು ಬಿಜೆಪಿಗೆ ಮತ ಹಾಕುತ್ತಾರೆ ಅಂದ್ರೆ ಏನೋ ಕಾರಣ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಚುನಾವಣೆ ಮಾಡುವ ರೀತಿಯೇ ಸರಿ ಇಲ್ಲವೋ ಏನೋ ಗೊತ್ತಾಗುತ್ತಿಲ್ಲ. ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಬಿಜೆಪಿ, ಎಸ್ಪಿಗಿಂತ ಹೆಚ್ಚು ಚುನಾವಣಾ ಸಭೆಗಳನ್ನು ಮಾಡಿದ್ದರು. ಆದರೂ ಮತ ಬೇರೆಯವರಿಗೆ ಹೋಗಿದೆ. ಇದನ್ನು ನಾವು ಆಂತರಿಕವಾಗಿ ವಿಶ್ಲೇಷಣೆ ಮಾಡಬೇಕು. 2024ರ ಲೋಕಸಭಾ ಚುನಾವಣೆ ಟರ್ನಿಂಗ್ ಪಾಯಿಂಟ್ ಎಂದರು.

ಈ ದೇಶದ ಅಭಿವೃದ್ಧಿ, ಬೆಳವಣಿಗೆ ಕಾರಣದಿಂದ 2024ರ ಚುನಾವಣೆ ಬಹಳ ಮುಖ್ಯ. ಅಷ್ಟರೊಳಗೆ ನಾವು ನಮ್ಮ ಮನೆಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಸ್ಥಳೀಯವಾಗಿ ಲೀಡರ್ ಶಿಪ್ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಂಚರಾಜ್ಯ ಚುನಾವಣೆ: ಇವಿಎಂ ಹ್ಯಾಕ್ ಆಗಿರಬಹುದು; ಡಾ.ಜಿ.ಪರಮೇಶ್ವರ್

ಪತಿಯನ್ನೇ ಕೊಲೆಗೈದ ಮಹಿಳಾ ಮೋರ್ಚಾ ಅಧ್ಯಕ್ಷೆ

ಬಿಜೆಪಿಯ ಸರಪಂಚ್ ನನ್ನು ಗುಂಡಿಟ್ಟು ಹತ್ಯೆ ಮಾಡಿದ ಉಗ್ರರು!

ಯಡಿಯೂರಪ್ಪನವರನ್ನು ಕಿತ್ತು ಹಾಕಿದರು ಎಂದ ಸಿದ್ದರಾಮಯ್ಯ: ಎದ್ದು ನಿಂತು ಮಾತನಾಡಿದ ಬಿಎಸ್ ವೈ

ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

 

ಇತ್ತೀಚಿನ ಸುದ್ದಿ