ಪಂಚರತ್ನ ಯಾತ್ರೆ ಎಫೆಕ್ಟ್ | ಎರಡು ಹಸುಗಳು ಬಲಿ: ಹಿಡಿ ಶಾಪ ಹಾಕಿದ ರೈತರು - Mahanayaka

ಪಂಚರತ್ನ ಯಾತ್ರೆ ಎಫೆಕ್ಟ್ | ಎರಡು ಹಸುಗಳು ಬಲಿ: ಹಿಡಿ ಶಾಪ ಹಾಕಿದ ರೈತರು

pancharatna yatra effect
28/02/2023

ಚಿಕ್ಕಮಗಳೂರು: ಮೂರು ದಿನದ ಪಂಚರತ್ನ ಯಾತ್ರೆ ಎಫೆಕ್ಟ್  ನಿಂದ ಎರಡು ಹಸುಗಳ ದಾರುಣ ಸಾವನ್ನಪ್ಪಿದ ಘಟನೆ ಕೊಪ್ಪ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದಿದೆ.

ಪಂಚರತ್ನ ಯಾತ್ರೆಯಲ್ಲಿ  ಎಸೆಯಲಾಗಿದ್ದ ಉಳಿದ ಊಟ, ಪ್ಲಾಸ್ಟಿಕ್ ಸೇವಿಸಿ ಎರಡು ಹಸುಗಳು ದಾರುಣವಾಗಿ ಸಾವನ್ನಪ್ಪಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ.

ಕುಮಾರಸ್ವಾಮಿಯ ಪಂಚರತ್ನ ಯಾತ್ರೆಯಿಂದಾಗಿ ನಮ್ಮ ಹಸು ಸತ್ತು ಹೋಗಿದೆ. ನಮ್ಮ ಬದುಕಿಗೆ ಆಧಾರವಾಗಿದ್ದ ಹಸುವನ್ನ ಕಳೆದುಕೊಂಡಿದ್ದೇವೆ ಎಂದು ಇಲ್ಲಿನ ರೈತರು ಕಣ್ಣೀರು ಹಾಕಿದ್ದಾರೆ.


Provided by

ವೈಕುಂಠಪುರದಲ್ಲಿ ಕುಮಾರಸ್ವಾಂಇ ಗ್ರಾಮ ವಾಸ್ತವ್ಯ ಮಾಡಿದ್ದರು. ಈ ವೇಳೆ 2000 ಜನಕ್ಕೆ ಅಡುಗೆ ಮಾಡಿಸಿದ್ದರು,  1000 ಜನ ಊಟ ಮಾಡಿದ್ದರು,  ಉಳಿದ ಊಟ, ಪ್ಲಾಸ್ಟಿಕ್ ಎಲ್ಲವನ್ನೂ ಕಾಡಿಗೆ ಬಿಸಾಡಿದ್ದರು.  ಅನ್ನ, ಪ್ಲಾಸ್ಟಿಕ್ ಎಲ್ಲವನ್ನೂ ಒಟ್ಟಿಗೆ ತಿಂದು ಎರಡು ಹಸುಗಳ ಸಾವನ್ನಪ್ಪಿದೆ ಎನ್ನಲಾಗಿದೆ.

ಇದೀಗ ಹಸುಗಳನ್ನು ಕಳೆದುಕೊಂಡಿರುವ ರೈತರು ಕಣ್ಣೀರು ಹಾಕಿದ್ದು, ಪಂಚರತ್ನ ಯಾತ್ರೆಗೆ ಹಿಡಿಶಾಪ ಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ