ದೇಶದ್ರೋಹಿ ಕೃತ್ಯ: ಪಂಚಾಯತ್ ರಸ್ತೆಗೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರು!
ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮಪಂಚಾಯತ್ ಗೆ ಸೇರಿದ ರಸ್ತೆಯೊಂದಕ್ಕೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರಿಡಲಾಗಿದ್ದು, ಇಲ್ಲಿನ ಪಡುಗಿರಿ ಎಂಬಲ್ಲಿ ಈ ಫಲಕವನ್ನು ಅಳವಡಿಸಲಾಗಿದೆ ಎನ್ನಲಾಗಿದೆ.
ಪಡುಗಿರಿಯ ಈ ರಸ್ತೆ ಸರ್ಕಾರಿ ರಸ್ತೆ ಎಂದು ಹೇಳಲಾಗಿದ್ದು, ಯಾರೋ ಖಾಸಗಿ ವ್ಯಕ್ತಿಗಳು ಈ ನಾಮಫಲಕವನ್ನು ಹಾಕಿದ್ದರು ಎನ್ನಲಾಗಿದೆ. ಈ ರೀತಿಯ ನಾಮಫಲಕ ಹಾಕಲಾಗಿದ್ದರೂ ಯಾರು ಈ ನಾಮಫಲಕ ಹಾಕಿದ್ದಾರೆ ಎನ್ನುವುದು ಗ್ರಾಮ ಪಂಚಾಯತ್ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಘಟನೆಯ ಬಗ್ಗೆ ಪಿಡಿಒ ರಾಜೇಂದ್ರ ಅವರು ಮಾಹಿತಿ ನೀಡಿದ್ದು, ಪಂಚಾಯತ್ ರಸ್ತೆಗೆ ಒಂದು ನಾಮಫಲಕವನ್ನು ಹಾಕಿದ್ದರು. ನಾಮಫಲಕ ಹಾಕಿದ್ದು ಯಾರು ಎನ್ನುವುದು ಗಮನಕ್ಕೆ ಬಂದಿಲ್ಲ, ಈ ರಸ್ತೆಗೆ ನಾಮಫಲಕ ಹಾಕುವ ಬಗ್ಗೆ ಪಂಚಾಯತ್ ನಿಂದ ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯಗಳನ್ನೂ ಕೈಗೊಂಡಿಲ್ಲ. ಈ ನಾಮಫಲಕದ ಬಗ್ಗೆ ದೂರು ಬಂದ ತಕ್ಷಣ ತೆರವುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ನಾಮಫಲಕವನ್ನು ಯಾರು ಇಲ್ಲಿ ಅಳವಡಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಇದೊಂದು ದೇಶದ್ರೋಹದ ಕೃತ್ಯವಾಗಿದ್ದು, ಕೃತ್ಯದಲ್ಲಿ ಪ್ರಭಾವಿಗಳ ಕೈವಾಡದ ಸಾಧ್ಯತೆಗಳಿವೆ ಎನ್ನುವ ಮಾತುಗಳು ಇದೀಗ ಕೇಳಿ ಬಂದಿದೆ. ನಾಮಫಲಕವನ್ನು ತೆರವುಗೊಳಿಸಿ, ಪಂಚಾಯತ್ ನವರು ತಮ್ಮ ತಲೆಮೇಲಿನ ಭಾರ ಕೆಳಗಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವವರು ಯಾರು ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರೈಲಿನಲ್ಲಿ ನಿದ್ದೆ ಮಾಡುವವರಿಗೆ ಸಿಹಿ ಸುದ್ದಿ!
ಪತಿಯನ್ನು ಕಟ್ಟಿ ಹಾಕಿ ಪತ್ನಿಯ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ!: ಅಮಾನವೀಯ ಘಟನೆ
ಪಠ್ಯಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಯಡವಟ್ಟು: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ
ಸೊಸೆಗೆ ಮಕ್ಕಳಾಗುತ್ತಿಲ್ಲ ಎಂದು ತನ್ನಿಬ್ಬರು ಪುತ್ರರಿಂದ ಅತ್ಯಾಚಾರ ನಡೆಸಿದ ಪಾಪಿ ಅತ್ತೆ!