ಸಸ್ಯಾಹಾರಿಗಳಿಗೆ ಪನೀರ್ ಬದಲು ಚಿಕನ್ ಕರಿ ಕಳುಹಿಸಿದ ಝೋಮೆಟೋಗೆ 20 ಸಾವಿರ ದಂಡ!
ಗ್ವಾಲಿಯರ್: ಪನೀರ್ ಕರಿ ಬದಲಿಗೆ ಚಿಕನ್ ಕರಿ ನೀಡಿದ ಹೋಟೆಲ್ ಗೆ ಗ್ರಾಹಕ ನ್ಯಾಯಾಲಯ 20,000 ರೂ. ದಂಡ ವಿಧಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಜೂನ್ 26 ರಂದು, ಶುದ್ಧ ಸಸ್ಯಾಹಾರಿಯಾದ ವಕೀಲ ಸಿದ್ಧಾರ್ಥ್ ಶ್ರೀವಾಸ್ತವ್ ಅವರ ಕುಟುಂಬವು ಝೊಮೆಟೊ ಮೂಲಕ ಜಿವಾಜಿ ಕ್ಲಬ್ ಎಂಬ ಹೋಟೆಲ್‌ನಿಂದ ಬಟರ್ ಪನೀರ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಮನೆಯವರು ಕವರ್ ತೆಗೆದಾಗ ಬಟರ್ ಪನೀರ್ ಬದಲು ಹೊಟೇಲ್ ನವರು ಬಟರ್ ಚಿಕನ್ ಕಳುಹಿಸಿರುವುದು ಗೊತ್ತಾಗಿದೆ. ಹೀಗಾಗಿ ಅವರು ಪದಾರ್ಥ ಸೇವಿಸಿರಲಿಲ್ಲ.
ಹೊಟೇಲ್ ನ ಕ್ರಮದಿಂದ ನೊಂದ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ಸೇವೆಯಲ್ಲಿನ ದೋಷದ ಆಧಾರದ ಮೇಲೆ ನ್ಯಾಯಾಲಯ ದಂಡ ವಿಧಿಸಿದೆ. “ತಪ್ಪು ನಡೆ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕ ಆಘಾತವನ್ನು ಉಂಟುಮಾಡಿದೆ. ಹೀಗಾಗಿ ದಂಡದ ಮೊತ್ತದ ಜತೆಗೆ ಪ್ರಕರಣ ನಿರ್ವಹಣೆಗೆ ಸಂಬಂಧಿಸಿದ ಮೊತ್ತವನ್ನೂ ಕುಟುಂಬಕ್ಕೆ ನೀಡಬೇಕು ಎಂದು ಕೋರ್ಟ್ ಸೂಚಿಸಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka