ಜಾತ್ರೆಯಲ್ಲಿ ಪಾನಿಪುರಿ ಸೇವಿಸಿದ 97 ಮಕ್ಕಳು ಅಸ್ವಸ್ಥ - Mahanayaka
6:16 PM Wednesday 5 - February 2025

ಜಾತ್ರೆಯಲ್ಲಿ ಪಾನಿಪುರಿ ಸೇವಿಸಿದ 97 ಮಕ್ಕಳು ಅಸ್ವಸ್ಥ

panipuri
29/05/2022

ಮಧ್ಯಪ್ರದೇಶ: ಪಾನಿಪುರಿ ಸೇವಿಸಿ ಸುಮಾರು 97 ಮಕ್ಕಳು ಅಸ್ವಸ್ಥಗೊಂಡ ಘಟನೆ ಮಧ್ಯಪ್ರದೇಶದ ಮಂಡಲಾ ಜಿಲ್ಲೆಯಲ್ಲಿ ನಡೆದಿದ್ದು, ವಿಷಾಹಾರ ಸೇವಿಸಿದ 97 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡಲಾ ಜಿಲ್ಲೆಯ ಸಿಂಗಾರ್ ಪುರ್ ಪ್ರದೇಶದಲ್ಲಿ ನಡೆದ ಜಾತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಪಾನಿಪುರಿ ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ಎಲ್ಲ ಮಕ್ಕಳು ಒಂದೇ ಅಂಗಡಿಯಿಂದ ಪಾನಿಪುರಿ ಕೊಂಡು ತಿಂದಿದ್ದರು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪಾನಿಪುರಿ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದು, ಆತ ಬಳಸುತ್ತಿದ್ದ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೊಲೀಸರ ರೈಫಲ್‌ ಗಳ ಬಿಗಿ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ಮಹಿಳೆಯರು!

ತ್ಯಾಜ್ಯ ವಸ್ತುಗಳಿಂದ ತಲೆಯೆತ್ತಿದ ದೈತ್ಯ ರಾಜಹಂಸ ಪ್ರತಿಮೆ!

ರಾಜಕೀಯ ನಾಯಕರ ಭದ್ರತಾ ಬೆಂಗಾವಲು ಹಿಂಪಡೆದ ಪಂಜಾಬ್ ಸರ್ಕಾರ

100 ವರ್ಷಗಳಷ್ಟು ಹಳೆಯ ಮಸೀದಿಗಳ ರಹಸ್ಯ ಸಮೀಕ್ಷೆಗೆ  ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಇತ್ತೀಚಿನ ಸುದ್ದಿ