ಪಂಜಾಬ್ ಸಿಎಂ ಚರಣ್‌ ಜಿತ್ ಸಿಂಗ್ ರಾಜೀನಾಮೆ - Mahanayaka
3:17 AM Wednesday 11 - December 2024

ಪಂಜಾಬ್ ಸಿಎಂ ಚರಣ್‌ ಜಿತ್ ಸಿಂಗ್ ರಾಜೀನಾಮೆ

panjab cm
10/03/2022

ಚಂಡೀಗಢ: ಪಂಜಾಬ್ ಮುಖ್ಯ ಮಂತ್ರಿ ಚರಣ್‌ಜಿತ್ ಸಿಂಗ್(ಚನ್ನಿ) ಇಂದು ಗವರ್ನರ್ ಬನ್ವರಿಲಾಲ್ ಪುರಾಹಿತ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಗುರುವಾರ ಮುಂಜಾನೆ ಚರಣ್‌ಜಿತ್ ಸಿಂಗ್‌ ತಮ್ಮ ಚಂಡೀಗಢದಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ. ಇದೀಗ ಪಂಜಾಬ್‌ನಲ್ಲಿ ಕಾಂಗ್ರೆಸ್ ಸೋಲುವುದು ಬಹುತೇಕ ಖಚಿತವಾಗಿದೆ.ಇದೀಗ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ.

ಪಂಜಾಬ್‌ನಲ್ಲಿ ಆಮ್ ಆದ್ಮಿಗೆ 89, ಕಾಂಗ್ರೆಸ್ 17 ಹಾಗೂ ಬಿಜೆಪಿ 4 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಅಲ್ಲದೆ, ಅಧಿಕಾರದ ಗದ್ದುಗೆ ಏರಲು 117 ಸ್ಥಾನಗಳ ಪೈಕಿ 59 ಸ್ಥಾನಗಳ ಅಗತ್ಯವಿದ್ದು, ಈ ಮ್ಯಾಜಿಕ್ ನಂಬರ್‌ನ್ನು ದಾಟಿರುವುದರಿಂದ ಆಮ್ ಆದ್ಮಿ ಪಾರ್ಟಿ ಅಧಿಕಾರ ಹಿಡಿಯಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

ಸೊಸೆ ಮೇಲಿನ ಕೋಪ: ಮೊಮ್ಮಗಳನ್ನು ಬಲಿ ಪಡೆದ ಅತ್ತೆ

ಪಂಜಾಬ್​ ನಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ: ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಉಕ್ರೇನ್ ​ನಿಂದ ಬಂದ ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ: ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಮುನ್ನಡೆ ಸಾಧಿಸಿದ ಪಕ್ಷಗಳು ಯಾವುದು?

 

ಇತ್ತೀಚಿನ ಸುದ್ದಿ