ಪಂಜಾಬ್​ ನಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ: ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

sadanada gowda
10/03/2022

ಮಂಗಳೂರು: ಪಂಜಾಬ್ ​ನಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಅಕಾಲಿದಳ, ಕಾಂಗ್ರೆಸ್ ಜಂಟಿಯಾಗಿ ಬಿಜೆಪಿ ವಿರುದ್ಧ ಗೂಬೆ ಕೂರಿಸಿದೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಪಂಚರಾಜ್ಯ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು, ನಿರೀಕ್ಷೆಯಂತೆ ಪಂಚ ರಾಜ್ಯಗಳ ಫಲಿತಾಂಶ ಬರುತ್ತಿದೆ. ಸರ್ಕಾರ ಮಾಡಿದ ಕೆಲಸ-ಕಾರ್ಯದ ಆಧಾರವಾಗಿ ಜನರು ಮತ ನೀಡಿದ್ದಾರೆ ಎಂದರು.

ಪಂಜಾಬ್​ನಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಅಕಾಲಿದಳ, ಕಾಂಗ್ರೆಸ್ ಜಂಟಿಯಾಗಿ ಬಿಜೆಪಿ ವಿರುದ್ಧ ಗೂಬೆ ಕೂರಿಸಿದೆ. ಬಿಜೆಪಿ ಪಂಜಾಬ್​ನಲ್ಲಿ ಅಧಿಕಾರ ವಿಸ್ತರಣೆ ಮಾಡದಂತೆ ಷಡ್ಯಂತ್ರ ರೂಪಿಸಿದ್ದರು. ಹೀಗಾಗಿ, ಬಿಜೆಪಿಗೆ ಪಂಜಾಬ್​ನಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಆದರೂ ಕಳೆದ ಬಾರಿಗಿಂತ ಪಂಜಾಬ್​ನಲ್ಲಿ ಬಿಜೆಪಿ ಸೀಟು ಅಧಿಕವಾಗಿದೆ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಯುಪಿಯಲ್ಲಿನ ಗೂಂಡಾ ರಾಜ್ಯವನ್ನು ಜನಸಾಮಾನ್ಯರ ರಾಜ್ಯವಾಗಿ ಪರಿವರ್ತನೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯೂ ಆಗಿದೆ. ಉತ್ತರ ಪ್ರದೇಶದಲ್ಲಿ ರಸ್ತೆಗಳು, ಮೂಲಸೌಕರ್ಯಗಳ ಅಭಿವೃದ್ಧಿಯಾಗಿದೆ. ಈ ಚುನಾವಣಾ ಫಲಿತಾಂಶ ಕರ್ನಾಟಕದ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದರು.

ಕರ್ನಾಟಕದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರೂ ಬಿಜೆಪಿ ಕರ್ನಾಟಕದಲ್ಲಿ ಅತೀ ದೊಡ್ಡ ಪಾರ್ಟಿ. ಉತ್ತರಾಖಾಂಡ್ ​ನಲ್ಲಿ ಮೂರು ಮುಖ್ಯಮಂತ್ರಿ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ, ಈಗ ಉತ್ತರಾಖಾಂಡ್ ಫಲಿತಾಂಶ ಏನಾಗಿದೆ? ಬಿಜೆಪಿಗೆ ಬೇರೆ-ಬೇರೆ ಪಾರ್ಟಿಗಳಿಂದ ಜನ ಬರುತ್ತಿದ್ದಾರೆ ಎಂದು ಡಿ.ವಿ.ಸದಾನಂದ ಗೌಡ  ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಕರ ರಸ್ತೆ ಅಪಘಾತ: ಡಿಎಂಕೆ ರಾಜ್ಯಸಭಾ ಸದಸ್ಯನ ಪುತ್ರ ಸಾವು

ಉಕ್ರೇನ್ ​ನಿಂದ ಬಂದ ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ: ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ

ಬಂಗಾಡಿಯ ಕೋಡಿ ಕೊಡಂಗೆ ಬೋರು ಗುಡ್ಡೆಯಲ್ಲಿ ಅತಿಕಾರ ತಳಿಯನ್ನು ಪ್ರಥಮವಾಗಿ ಬಿತ್ತಿದ  ಕಾನದ – ಕಟದರು | ಸಂಚಿಕೆ: 16

ನನ್ನ ಮಗನ ಬಗ್ಗೆ ಇಲ್ಲ ಸಲ್ಲದ್ದು ಮಾತನಾಡಬೇಡಿ: ಟ್ರೋಲಿಗರಿಗೆ ಕೈಮುಗಿದು ಬೇಡಿದ ನವೀನ್ ತಾಯಿ

 

ಇತ್ತೀಚಿನ ಸುದ್ದಿ

Exit mobile version