ಪಂಜಾಬ್ ವಿಧಾನಸಭೆ ಚುನಾವಣೆ: ಫೆ.20ಕ್ಕೆ ಮತದಾನ ಮುಂದೂಡಿಕೆ
ನವದೆಹಲಿ: ಫೆ. 14ರಂದು ನಡೆಯಬೇಕಿದ್ದ ಪಂಜಾಬ್ ವಿಧಾನಸಭೆ ಚುನಾವಣೆ ಮತದಾನವನ್ನು ಕೇಂದ್ರ ಚುನಾವಣಾ ಆಯೋಗ 6 ದಿನ ಮುಂದೂಡಿದ್ದು, 117 ಕ್ಷೇತ್ರಗಳಿಗೂ ಫೆ.14ರ ಬದಲು ಒಂದೇ ಹಂತದಲ್ಲಿ ಫೆ.20ರಂದು ಮತದಾನ ನಡೆಯಲಿದೆ.
ಫೆ.16ಕ್ಕೆ ಗುರು ರವಿದಾಸ್ ಜಯಂತಿ ಇದೆ. ಪಂಜಾಬ್ ಜನಸಂಖ್ಯೆಯ ಶೇ.32ರಷ್ಟಿರುವ ಪ.ಜಾತಿ ಸಮುದಾಯದವರು ಸೇರಿದಂತೆ ರಾಜಯದ ಬಹುತೇಕರು ಗುರು ರವಿದಾಸ್ ಅವರ ಅನುಯಾಯಿಗಳು. ಹಾಗಾಗಿ ಅವರ ಜನ್ಮದಿನದ ಹಿನ್ನೆಲೆ ಪಂಜಾಬ್ ನಿಂದ ಲಕ್ಷಾಂತರ ಮಂದಿ ಉತ್ತರ ಪ್ರದೇಶದ ಬನಾರಸ್ ಗೆ ತೆರಳಿ ಗುರು ಜಯಂತಿ ಆಚರಿಸುತ್ತಾರೆ. ಪರಿಣಾಮ ಬಹುತೇಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ.
ಹಾಗಾಗಿ ಚುನಾವಣೆಯನ್ನ ಮುಂದೂಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ(ಸಂಯುಕ್ತ), ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಹಾಗೂ ಬಿಎಸ್ ಪಿ ಮನವಿ ಮಾಡಿತ್ತು. ಇದೀಗ ಈ ಮನವಿಯನ್ನು ಪರಿಗಣಿಸಿರುವ ಚುನಾವಣಾ ಆಯೋಗ, ಮತದಾನದ ದಿನಾಂಕ ಬದಲಿಸಿ ಆದೇಶ ಹೊರಡಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಚರ್ಮದ ಸಮಸ್ಯೆಗಳ ನಿವಾರಣೆಗೆ ವೀಳ್ಯದೆಲೆ ಪರಿಣಾಮಕಾರಿ
ಧರ್ಮಸ್ಥಳ: ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ 108 ಪುರೋಹಿತರಿಂದ ಮಹಾಮೃತ್ಯುಂಜಯ ಹೋಮ
ಖ್ಯಾತ ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ವಿಧಿವಶ
ಬ್ರಿಟಿಷ್ ಕಾಲದ ಬಂಗಲೆಯಲ್ಲಿ ಕಚೇರಿ ತೆರೆದ ಸಚಿವ ಎಸ್.ಅಂಗಾರ
ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ: ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು; ಸಿದ್ಧರಾಮಯ್ಯ