ಪಂಜ್ ಶಿರ್ ಗಳನ್ನು ತಾಲಿಬಾನ್ ವಶಕ್ಕೆ ಪಡೆದಿರುವುದು ಸುಳ್ಳು | ಸ್ಪಷ್ಟಪಡಿಸಿದ NRF
ಕಾಬೂಲ್: ಪಂಜ್ ಶಿರ್ ನ್ನು ತಾಲಿಬಾನ್ ವಶಕ್ಕೆ ಪಡೆದಿದೆ ಎನ್ನುವ ಹೇಳಿಕೆ ಸುಳ್ಳಾಗಿದ್ದು, ಹೋರಾಟವನ್ನು ಮುಂದುವರಿಸಲು ಕಣಿವೆಯ ಎಲ್ಲ ವ್ಯೂಹಾತ್ಮಕ ಸ್ಥಳಗಳಲ್ಲಿ ರಕ್ಷಣಾ ಪಡೆಗಳು ಸನ್ನದ್ಧಗೊಂಡಿವೆ ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ – ಎನ್ ಆರ್ ಎಫ್ ಟ್ವೀಟ್ ಮಾಡಿದೆ.
ತಾಲಿಬಾನ್ ನ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಮತ್ತು ತಾಲಿಬಾನ್ ನ ವಕ್ತಾರ ಜಬೀವುಲ್ಲಾ ಮುಜಾಹಿದ್, ರಾಷ್ಟ್ರವ್ಯಾಪಿ ಭದ್ರತೆ ಸ್ಥಾಪನೆಯ ನಮ್ಮ ಪ್ರಯತ್ನಗಳು ಫಲಿಸಿವೆ. ಪಂಜ್ ಶಿರ್ ಪ್ರಾಂತ್ಯವನ್ನು ಅಲ್ಲಾ ಮತ್ತು ಜನರ ಬೆಂಬಲದಿಂದ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿಕೆ ನೀಡಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್, ಪಂಜಶೀರ್ ಅನ್ನು ವಶಪಡಿಸಿಕೊಂಡಿರುವುದಾಗಿ ಹೇಳುತ್ತಿರುವ ತಾಲಿಬಾನ್ ಗಳ ಹೇಳಿಕೆಗಳು ಸುಳ್ಳು. ಹೋರಾಟವನ್ನು ಮುಂದುವರಿಸಲು ಕಣಿವೆಯ ಎಲ್ಲ ವ್ಯೂಹಾತ್ಮಕ ಸ್ಥಳಗಳಲ್ಲಿ ರಕ್ಷಣಾ ಪಡೆಗಳು ಸನ್ನದ್ಧಗೊಂಡಿವೆ. ತಾಲಿಬಾನ್ ಮತ್ತು ಅದರ ಮಿತ್ರರ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದು ನಾವು ಅಫ್ಗಾನಿಸ್ತಾನದ ಜನರಿಗೆ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಪಂಜ್ ಶಿರ್ ಪ್ರಾಂತ್ಯವು ಕಳೆದ ಏಳು ದಿನಗಳಿಂದ ತಾಲಿಬಾನ್ ಗೆ ಪ್ರತಿರೋಧ ತೋರುತ್ತಿದೆ. ತಾಲಿಬಾನ್ ಮತ್ತು ಪಂಜ್ ಶಿರ್ ಪ್ರತಿರೋಧ ಪಡೆಗಳ ಕಾಳಗದಲ್ಲಿ ಎರಡೂ ಕಡೆ ಸಾವು ನೋವು ಸಂಭವಿಸುತ್ತಿದೆ. ಆದರೆ, ನಾವು ಸಾಯಲು ತಯಾರಿದ್ದೇವೆ, ತಾಲಿಬಾನಿಗರ ಎದುರು ಶರಣಾಗಲು ತಯಾರಿಲ್ಲ ಎನ್ನುವ ಸಂದೇಶವನ್ನು ಪಂಜ್ ಶಿರ್ ಗಳು ರವಾನಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು!
ರೈಡಿಂಗ್ ಹೊರಟಿದ್ದ ಬೈಕ್ ಕಂಟೈನರ್ ಗೆ ಡಿಕ್ಕಿ | ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್
ಕೊವಿಡ್ ಲಸಿಕೆ ಪಡೆದ ಬಳಿಕ ನಮ್ಮ ಮಗ ಮೃತಪಟ್ಟ | ಪೋಷಕರಿಂದ ಗಂಭೀರ ಆರೋಪ
ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಬೆಳಗಾವಿ ಬಿಜೆಪಿ ತೆಕ್ಕೆಗೆ, ಧಾರವಾಡ, ಕಲಬುರ್ಗಿ ಅತಂತ್ರ
ಕಾನ್ಶಿ ಫೌಂಡೇಶನ್ ಬಗ್ಗೆ ವಿಜಯ ಮಹೇಶ್ ಅಪಾರವಾದ ಕನಸನ್ನು ಹೊಂದಿದ್ದರು | ಯೋಗೇಶ್ ಮಾಸ್ಟರ್
ಪೊಲೀಸರ ಎದುರೇ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರಿಗೆ ಹಲ್ಲೆ ನಡೆಸಿದ ಬಲಪಂಥೀಯರು!