ರಿಷಭ್ ಪಂತ್ ಕಾರು ಅಪಘಾತದ ಕಾರಣ ಬಯಲು! - Mahanayaka

ರಿಷಭ್ ಪಂತ್ ಕಾರು ಅಪಘಾತದ ಕಾರಣ ಬಯಲು!

rishab pant
30/12/2022

ನವದೆಹಲಿ: ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಾಥಮಿಕ ತನಿಖಾ ಮಾಹಿತಿಯನ್ನು ಬಹಿರಂಗಗೊಳಿಸಿದ್ದು,  ಅಪಘಾತಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದ್ದಾರೆ.


Provided by

ಕಾರು ಅಪಘಾತವಾದಾಗ ಪಂತ್ ಒಬ್ಬರೇ ಕಾರಿನಲ್ಲಿದ್ದರು ಹಾಗೂ ಕಾರು ಚಾಲನೆಯಲ್ಲಿದ್ದಾಗ ಅವರು ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣವಾಯ್ತು ಎಂದಿದ್ದಾರೆ. ರಿಷಭ್ ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಎರಡು ಬಾರಿ ಪಲ್ಟಿಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಕೆಲ ಸೆಕೆಂಡ್ ನಿದ್ದೆ ಮಂಪರು ಆವರಿಸಿದ್ದರಿಂದಾಗಿ ಕಾರಿನ ನಿಯಂತ್ರಣ ಕಳೆದುಕೊಂಡೆ ಎಂದು ಸ್ವತಃ ರಿಷಭ್ ಪಂತ್ ಅವರೇ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ತಿಳಿಸಿರುವುದಾಗಿ ವರದಿಯಾಗಿದೆ.


Provided by

ಅಪಘಾತವಾದ ಪರಿಣಾಮ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಕಾರಿನ ಗಾಜು ಒಡೆದು ಪಂತ್ ಹೊರಗೆ ಬಂದಿದ್ದು, ಈ ವೇಳೆ ಅವರ ಬೆನ್ನಿಗೆ ಬೆಂಕಿಯಿಂದ ಸುಟ್ಟ ಗಾಯವಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ