ಎರಡು ಕಡೆ ಸ್ಪರ್ಧೆ ಮಾಡೋ ಸನ್ನಿವೇಶ ನನಗಾಗಲಿ, ಡಿಕೆಶಿಗಾಗಲಿ ಬಂದಿಲ್ಲ: ಸಿದ್ದರಾಮಯ್ಯ ಸ್ಪರ್ಧೆಗೆ ಪರಮೇಶ್ವರ್ ಪ್ರತಿಕ್ರಿಯೆ
ತುಮಕೂರು: ಎರಡು ಕಡೆ ಸ್ಪರ್ಧೆ ಮಾಡ್ತಿನಿ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಆದ್ರೆ ನಾಳೆ ನಮ್ಮಲ್ಲಿ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಬಗ್ಗೆ ತೀರ್ಮಾನ ಆಗುತ್ತೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೋಡೋದರಲ್ಲಿ ಈ ಕಮಿಟಿಯೆ ಫೈನಲ್ ಆಗಲಿದೆ. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಪರ್ಮಿಷನ್ ಕೊಟ್ರೆ ಎರಡು ಕಡೆ ಸ್ಪರ್ಧೆ ಮಾಡ್ತಾರೆ. ಆ ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗೆ ಯಾರಿಗೂ ಬಂದಿಲ್ಲ ಎಂದರು.
ಎರಡು ಕಡೆ ಸ್ಪರ್ಧೆ ಮಾಡ್ಬೇಕು ಎಂಬ ಸನ್ನಿವೇಶ ನನಗಾಗಲಿ ಡಿ.ಕೆ.ಶಿವಕುಮಾರ್ ಗೆ ಆಗಲಿ ಬಂದಿಲ್ಲ. ಹಾಗಾಗಿ ನಾವು ಎರಡು ಕಡೆ ಟಿಕೆಟ್ ಕೊಡಿ ಅಂತ ಕೇಳಿಕೊಂಡಿಲ್ಲ. ಅವರು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದೋರು ಎಂದರು. ರಾಜ್ಯ ನಾಯಕ ಅವರಿಗೆ ಯಾವುದೇ ರೀತಿ ತೊಂದರೆ ಆಗ್ಬಾರದು. ಜನರು ಕೂಡಾ ನೀವು ಬಂದು ಸ್ಪರ್ಧೆ ಮಾಡಿ ಅಂತ ಕೇಳ್ಕೊಂತ್ತಿದ್ದಾರೆ. ಸಿದ್ದರಾಮಯ್ಯ ಕೂಡಾ ಕೋಲಾರದ ಜನರ ಜೊತೆ ಕಮಿಟ್ಮೆಂಟ್ ಮಾಡಿಕೊಂಡು ಬಂದಿದ್ರು. ಹಾಗಾಗಿ ಎರಡು ಸ್ಪರ್ಧೆ ಮಾಡುವ ಸನ್ನಿವೇಶ ಎದುರಾಗಿದೆ. ಇಲ್ಲದಿದ್ದರೆ ಅವರಿಗೂ ಕೂಡಾ ಎರಡು ಕಡೆ ಸ್ಪರ್ಧೆ ಮಾಡೋ ಅಗತ್ಯತೆ ಇರಲಿಲ್ಲ. ಅವರು ವರುಣಾದಲ್ಲಿ ನಿಂತ್ರು ಗೆಲ್ತಾರೆ. ಎಲ್ಲೆ ನಿಂತ್ರು ಗೆಲ್ತಾರೆ ಎಂದರು.
ಅವರಿಗೆ ಸೋಲು ಭೀತಿ ಕಂಡ್ರೆ. ನಾವೆಲ್ಲಾ ಹೆದರಿಕೊಳ್ಳಬೇಕಾಗುತ್ತೆ. ಸೋಲೋ ಭೀತಿಯಿಂದ ಅಲ್ಲಾ ಜನರ ಅಪೇಕ್ಷೆ ಮೇರೆಗೆ ನಿಲ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ಸುತ್ತುಮುತ್ತಲಿನ ಕ್ಷೇತ್ರಗಳಿಗೂ ಅನುಕೂಲ ಆಗುತ್ತೆ ಎಂದರು. ಸಿಎಂ ರೇಸ್ ನಲ್ಲಿರುವರಿಗೆ ಸ್ವಪಕ್ಷಿಯರಿಂದಲೇ ಅಡ್ಡಗಾಲು ಹಾಕುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿಯಾಗಿ ನನಗೆಲ್ಲೂ ಕಾಣ್ತಿಲ್ಲ. ಇದೆಲ್ಲಾ ಕ್ರಿಯೆಟೆಡ್, ಒಂದೊಂದು ಸಲ ನಾವೆಲ್ಲಾ ಸೇರಿ ಕ್ರಿಯೆಟ್ ಮಾಡ್ಕೊಂಡು ಬಿಡ್ತಿವಿ ಎಂದರು. ಮೆಜಾರಿಟಿ ಬಂದ ಮೇಲೆ ಇದೆಲ್ಲಾ ತಿರ್ಮಾನ ಆಗುತ್ತೆ. ಅದಕ್ಕಿಂತ ಮುಂಚೆನೆ ನಾವೆಲ್ಲಾ ತೀರ್ಮಾನ ಮಾಡ್ಕೊಂಳೋದಿಕ್ಕೆ ಆಗಲ್ಲ. ಮೊದಲನೇ ಹಂತದಲ್ಲಿ ನಾವು ಪಕ್ಷವನ್ನ ಅಧಿಕಾರಕ್ಕೆ ತರುವ ಕೆಲಸ ಮಾಡ್ಬೇಕು. ಮಿಕ್ಕಿದೆಲ್ಲಾ ಹೈಕಮಂಡ್ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw