ಪರವಾನಗಿ ರಹಿತವಾಗಿ ಮರಳು ಸಾಗಾಟ: ಎರಡು ಟಿಪ್ಪರ್ ವಶಕ್ಕೆ - Mahanayaka
11:58 AM Thursday 12 - December 2024

ಪರವಾನಗಿ ರಹಿತವಾಗಿ ಮರಳು ಸಾಗಾಟ: ಎರಡು ಟಿಪ್ಪರ್ ವಶಕ್ಕೆ

udupi
20/12/2022

ಕುಂದಾಪುರ:  ಕುಂದಾಪುರ ತಾಲೂಕು  ತ್ರಾಸಿ ಗ್ರಾಮದ ಮೊವಾಡಿ ಪರಿಸರದಲ್ಲಿ ಪರವಾನಿಗೆ ರಹಿತವಾಗಿ  ಮರಳು  ಸಾಗಾಟ ನಡೆಸುತ್ತಿರುವ   ಬಗ್ಗೆ  ಸಾರ್ವಜನಿಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ  ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ. ಯು ಅವರ ಮಾರ್ಗದರ್ಶನದಲ್ಲಿ  ಸೋಮವಾರ ಭೂ ವಿಜ್ಞಾನಿ ಸಂಧ್ಯಾ ಅವರು  ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಮೋವಾಡಿ ಪರಿಸರದಲ್ಲಿ  ಕಾರ್ಯಚಾರಣೆ ನಡೆಸಿ ಮರಳು ಸಹಿತ 2 ಟಿಪ್ಪರ್ ಲಾರಿ  ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ವಹಿಸುವವರೆಗೆ  ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ ಲಾರಿಗಳನ್ನು ಗಂಗೊಳ್ಳಿ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ‌ ಎಂದು ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ