ಪರೀಕ್ಷೆ ಮುಗಿಸಿ ಹೊರ ಬಂದ ಸಹಪಾಠಿಯ ಕತ್ತು ಸೀಳಿ ಕೊಂದ ಪ್ರೇಮಿ!

kochi kerala
02/10/2021

ಕೊಚ್ಚಿ: ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಯುವಕನೋರ್ವ ಪೇಪರ್ ಕಟರ್ ನಿಂದ ಯುವತಿಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಪರೀಕ್ಷೆ ಹಾಲ್ ನಿಂದ ಹೊರ ಬರುತ್ತಿದ್ದಂತೆಯೇ ವಿದ್ಯಾರ್ಥಿನಿಯ ಕತ್ತು ಸೀಳಿ ಆರೋಪಿಯು ಹತ್ಯೆ ನಡೆಸಿದ್ದಾನೆ.

24 ವರ್ಷ ವಯಸ್ಸಿನ ನಿತಿನಾ ಮೋಲ್ ಹತ್ಯೆಗೀಡಾದ ಯುವತಿಯಾಗಿದ್ದು, ಅಭಿಷೇಕ್ ಬೈಜು ಎಂಬಾತ ಹತ್ಯೆ ಆರೋಪಿಯಾಗಿದ್ದಾರೆ. ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಶುಕ್ರವಾರ ಬೆಳಗ್ಗೆ ಆಹಾರ ಸಂಸ್ಕರಣಾ ತಂತ್ರಜ್ಞಾನದಲ್ಲಿ ತಮ್ಮ ಪದವಿ ಕೋರ್ಸ್ ನ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಬಂದಿದ್ದರು ಎನ್ನಲಾಗಿದೆ.

ನಿತಿನಾ ಪರೀಕ್ಷೆ ಮುಗಿಸಿ ಹಾಕಲ್ ನಿಂದ ಹೊರ ಬರುತ್ತಿದ್ದಂತೆಯೇ ಬೈಜು ಆಕೆಯ ಕುತ್ತಿಗೆಯನ್ನು ಪೇಪರ್ ಕಟ್ಟರ್ ನಿಂದ ಸೀಳಿ ಹತ್ಯೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೋಲ್ ನೆಲದಲ್ಲಿ ಬಿದ್ದಿರುವುದನ್ನು ಕಂಡು ಸೆಕ್ಯೂರಿಟಿ ಸಿಬ್ಬಂದಿ ಜೋರಾಗಿ ಬೊಬ್ಬೆ ಹಾಕಿದ್ದಾರೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿದ್ದಳು.

ಅಭಿಷೇಕ್ ಹಾಗೂ ನಿತಿನಾ ಸಹಪಾಠಿಗಳಾಗಿದ್ದರು. ಆಕೆಯನ್ನು ಅಭಿಷೇಕ್ ಪ್ರೀತಿಸುತ್ತಿದ್ದ. ಈ ವಿಚಾರವನ್ನು ಆಕೆಗೆ ತಿಳಿಸಿದ ವೇಳೆ ಆಕೆ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದಾಗಿ ಅಭಿಷೇಕ್ ತೀವ್ರವಾಗಿ ಕೋಪಗೊಂಡಿದ್ದ ಎನ್ನಲಾಗಿದೆ. ಪರೀಕ್ಷೆ ಮುಗಿಸಿ ಬಂದ ನಿತಿನಾಳ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ.

ಇನ್ನೂ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸೆಕ್ಯೂರಿಟಿ ಗಾರ್ಡ್, ಆರೋಪಿ ಹಾಗೂ ಯುವತಿಯು ಕಾಲೇಜು ಆವರಣದ ಡ್ರೈವ್ ವೇ ಪಕ್ಕದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಆ ಬಳಿಕ ಆತ ಆಕೆಯ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡದನ್ನು ನೋಡಿದೆ. ಆದರೆ ನಾನು ಬ್ಲೇಡ್ ನೋಡಿಲ್ಲ. ಸೆಕೆಂಡುಗಳ ನಂತರ ರಕ್ತ ಚೆಲ್ಲುತ್ತಿರುವುದು ಕಂಡು ನಾನು ತಕ್ಷಣವೇ ಪ್ರಾಂಶುಪಾಲರಿಗೆ ಕರೆ ಮಾಡಿ ತಿಳಿಸಿದೆ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಮತ್ತೆ ಉದಯಿಸಲಿದೆ ಕೆಜೆಪಿ? | ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾ?

ಕ್ಲಾಸ್ ನಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಯ ಕಣ್ಣಿಗೆ ಪೆನ್ ಎಸೆದ ಶಿಕ್ಷಕಿಗೆ ಜೈಲು!

BSPಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು | ಕಾರ್ಯಕರ್ತರ ಸಮಾವೇಶದಲ್ಲಿ ರಾಮ್ಜೀ ಗೌತಮ್ ಕರೆ

ಸೊಸೆಗೆ ಚಾಕುವಿನಿಂದ ಚುಚ್ಚಿದ ಅತ್ತೆ: ಸೊಸೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಅತ್ತೆ ನೇಣಿಗೆ ಶರಣು

ನೀರು ಎಂದು ಭಾವಿಸಿ ಪೆಟ್ರೋಲ್ ಕುಡಿದ ವೃದ್ಧೆ ಸಾವು!

 

ಇತ್ತೀಚಿನ ಸುದ್ದಿ

Exit mobile version