ಹಾವು ಕಚ್ಚಿದೆ ಎಂದರೂ ಆಸ್ಪತ್ರೆಗೆ ಸೇರಿಸದ  ಪೋಷಕರು:  ವಿಷವೇರಿ ಬಾಲಕಿ ಸಾವು

akshatha
23/05/2023

ಶಿವಮೊಗ್ಗ: ನನಗೆ ಹಾವು ಕಚ್ಚಿದೆ ಎಂದು ರಾತ್ರಿ ಮಗಳು ಹೇಳಿದ್ದಾಳೆ. ಆದರೆ ಲೈಟ್ ಹಾಕಿ ಮನೆಯವರು ಹಾವನ್ನು ಹುಡುಕಿದ್ದು, ಹಾವು ಕಾಣದೇ ಹೋದಾಗ  ಹಾವು ಕಚ್ಚಿಲ್ಲ ಎಂದು ತಾವೇ ತೀರ್ಮಾನಿಸಿ,  ಮಲಗಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಆಕೆ ಪ್ರಾಣವನ್ನೇ ಬಿಟ್ಟಿದ್ದಾಳೆ.

ಈ ಘಟನೆ ನಡೆದಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತಲ್ಲೂರು ಗ್ರಾಮದಲ್ಲಿ.  ನಾಲ್ಕು ದಿನಗಳ ಹಿಂದೆ ಅಕ್ಷತಾ(17) ಎಂಬ ಬಾಲಕಿ ರಾತ್ರಿ ಮಲಗಿದ್ದ ವೇಳೆ ಆಕೆಗೆ ಹಾವು ಕಚ್ಚಿದೆ. ಆಕೆ ಪೋಷಕರನ್ನು ಕರೆದು ಹಾವು ಕಚ್ಚಿದೆ ಎಂದು ಹೇಳಿದ್ದಾಳೆ. ರಾತ್ರಿ ಲೈಟ್ ಹಾಕಿ ಇಡೀ ಮನೆಯಲ್ಲಿ ಹಾವನ್ನು ಹುಡುಕಿದರೂ ಹಾವು ಪತ್ತೆಯಾಗಿರಲಿಲ್ಲ.  ಹೀಗಾಗಿ ಮನೆಯವರು ನಿರ್ಲಕ್ಷ್ಯ ವಹಿಸಿದ್ದರು.

ಆದರೆ ಬೆಳಗ್ಗಿನ ವೇಳೆ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು.  ಹೀಗಾಗಿ ಆನವಟ್ಟಿ ಖಾಸಗಿ ಕ್ಲೀನಿಕ್ ಗೆ ಬಾಲಕಿಯನ್ನು ಕರೆದೊಯ್ದಿದ್ದಾರೆ, ಅಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಶಿಕಾರಿಪುರ ಆಸ್ಪತ್ರೆಗೆ ಬಾಲಕಿಯನ್ನು ಕರೆದೊಯ್ಯಲಾಗಿದೆ. ಹಾವು ಕಚ್ಚಿದೆ ಎಂದು ತಿಳಿದ ನಂತರ ಶಿವಮೊಗ್ಗದ ಮೆಗ್ಗಾನ್  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕಿಯ ಮೈಗೆ ವಿಷ ಆವರಿಸಿದ್ದು, ನಿರಂತರ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ನಿನ್ನೆ ರಾತ್ರಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಮನೆಯವರು ಹಾವಿನ ಬದಲು ಯಾವುದೋ ಹುಳು ಕಚ್ಚಿರಬಹುದು ಎಂದು ಸಂದೇಹಪಟ್ಟಿದ್ದರು. ಇದೀಗ ಕುಟುಂಬದ ನಿರ್ಲಕ್ಷ್ಯದಿಂದಾಗಿ ತಮ್ಮ ಮಗಳನ್ನೇ ಅವರು ಕಳೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

 

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version