ಡಿಸೆಂಬರ್ 2: ಪರಿವರ್ತನಾ ಕೋ -– ಅಪರೇಟಿವ್ ಸೊಸೈಟಿಯ ಮಂಗಳೂರು ನಗರದ ನೂತನ ಶಾಖೆ ಉದ್ಘಾಟನೆ
ಮಂಗಳೂರು: ಪರಿವರ್ತನಾ ಕೋ – ಅಪರೇಟಿವ್ ಸೊಸೈಟಿ(ಲಿ.) ಬಜಪೆ ಇದರ ಮಂಗಳೂರು ನಗರದ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 2ರಂದು ಬೆಳಿಗ್ಗೆ 10:30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಲಿದೆ.
ಪರಿವರ್ತನಾ ಕೋ—ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕರಾದ ವೇದ ವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವಾನ್ ಡಿ.ಸೋಜ, ಮಂಗಳೂರು ಮೇಯರ್ ಮನೋಜ್ ಕುಮಾರ್, ಕಾರ್ಪೋರೇಟರ್ ಅಬ್ದುಲ್ ಲತೀಫ್, ಅಪರ ಜಿಲ್ಲಾಧಿಕಾರಿಗಳಾದ ಸಂತೋಷ್ ಕುಮಾರ್ ಜಿ., ಕರ್ನಾಟಕ ಬ್ಯಾಂಕ್ ನ ನಿವೃತ್ತ ಹಿರಿಯ ಅಧಿಕಾರಿ ಸದಾಶಿವ ಪಡುಬಿದ್ರೆ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಬಜಪೆ ಇದರ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಮೋನಪ್ಪ ಶೆಟ್ಟಿ ಎಕ್ಕಾರು, ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಉಪ ನಿಬಂಧಕರು ರಮೇಶ್ ಎಚ್.ಎನ್., ಸಹಕಾರ ಸಂಘಗಳ ಉಪ ನಿಬಂಧಕ ಕಚೇರಿಯ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜೆ., ಸಾಮಾಜಿಕ ಕಾರ್ಯಕರ್ತರು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತರು, ಬಿಎಸ್ ಪಿ ದ.ಕ. ಜಿಲ್ಲಾಧ್ಯಕ್ಷರಾದ ಗೋಪಾಲ್ ಮುತ್ತೂರು, ಸಾಮಾಜಿಕ ಕಾರ್ಯಕರ್ತರು, ಮಂಗಳೂರು ದಕ್ಷಿಣ ಜೆಡಿಎಸ್ ಅಧ್ಯಕ್ಷರಾದ ಸುಮತಿ ಹೆಗಡೆ, ಸಾಮಾಜಿಕ ಕಾರ್ಯಕರ್ತರು, ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿಗಳಾದ ಆನಂದ ಮಿತ್ತಬೈಲ್, ಅಂಚೆ ಮತ್ತು ಬಿಎಸ್ ಎನ್ ಎಲ್ ಸಹಕಾರ ಸಂಘದ ಶೈಲೇಶ್ ಕುಮಾರ್, ದ.ಕ. ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘದ ಅಧ್ಯಕ್ಷರಾದ ಶೈಲೇಶ್ ಕುಮಾರ್, ನಂದಿನಿ ಪತ್ತಿನ ಸಹಕಾರ ಸಂಘ ಇದರ ಉಪಾಧ್ಯಕ್ಷರಾದ ಶಶಿಧರ್ ಕಟೀಲು, ಶ್ರೀಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಷಾ, ಪರಿವರ್ತನಾ ಗ್ರಾಮೀಣ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ವಿಲಿಯಂ ಇ ಲೋಬೋ ಭಾಗವಹಿಸಲಿದ್ದಾರೆ.
ಪರಿವರ್ತನಾ ಕೋ – ಅಪರೇಟಿವ್ ಸೊಸೈಟಿಯಲ್ಲಿರುವ ವಿವಿಧ ಸೌಲಭ್ಯಗಳೇನು?
ಠೇವಣಿ ಸೌಲಭ್ಯಗಳು:
* ಸದಸ್ಯರ ಉಳಿತಾಯ ಖಾತೆ .
* ಸದಸ್ಯರ ಚಾಲ್ತಿ ಖಾತೆ ಮಾಸಿಕ ಠೇವಣಿ.
* ನಿರಖು ಠೇವಣಿ.
* ಪರಿವರ್ತನಾ ನಿತ್ಯ ನಿಧಿ ಠೇವಣಿ ಪರಿವರ್ತನಾ ನಗದು ಪತ್ರ.
ಸಾಲ ಸೌಲಭ್ಯಗಳು:
ಜಾಮೀನು ಸಾಲ, ವೈಯುಕ್ತಿಕ ಸಾಲ, ವ್ಯಾಪಾರ ಸಾಲ, ಠೇವಣಿ ಸಾಲ, ಸ್ವ–ಸಹಾಯ ಗುಂಪು ಸಾಲ, ವೇತನ ಆಧಾರಿತ ಸಾಲ, ಠೇವಣಿ ಮೇಲಿನ ಸಾಲ, ಚಿನ್ನಾಭರಣ ಈಡಿನ ಸಾಲ, ವಾಹನ ಸಾಲ.
ಇತರ ಸೇವಾ ಸೌಲಭ್ಯಗಳು:
ಗಣಕೀಕೃತ ಬ್ಯಾಂಕಿಂಗ್ ಸೇವೆ.
ಆರ್ ಟಿಸಿ ಪಡೆಯುವ ಸೌಲಭ್ಯ.
ಪರಿವರ್ತನಾ ನಗದು ಪತ್ರ 7 ವರ್ಷಗಳಲ್ಲಿ ದ್ವಿಗುಣವಾಗುವುದು.
ಠಸೆ ಪೇಪರ್ ಇ—ಸ್ಟ್ಯಾಂಪ್.
NEFT/RTGS ಸೌಲಭ್ಯ.
ಸ್ವಸಹಾಯ ಗುಂಪುಗಳನ್ನು ಪ್ರವರ್ತಿಸಲಾಗುವುದು.
ಪರಿವರ್ತನಾ ನಿಧಿ ಠೇವಣಿ(ಪಿಗ್ಮಿ)ಯಲ್ಲಿ ದಿನಾ ಉಳಿತಾಯವನ್ನು ಮಾಡಿ ಆರ್ಥಿಕವಾಗಿ ಸದೃಢರಾಗಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: