ಶಾಕ್ ನೀಡಿದ ಪಾರ್ಲೆ—ಜಿ: ಪಾರ್ಲೆ ಉತ್ಪನ್ನಗಳ ಬೆಲೆ ಏರಿಕೆ - Mahanayaka

ಶಾಕ್ ನೀಡಿದ ಪಾರ್ಲೆ—ಜಿ: ಪಾರ್ಲೆ ಉತ್ಪನ್ನಗಳ ಬೆಲೆ ಏರಿಕೆ

parle
24/11/2021

ನವದೆಹಲಿ: ಬಿಸ್ಕೇಟ್ ತಯಾರಿಕಾ ಪ್ರಮುಖ ಕಂಪೆನಿ ಪಾರ್ಲೆ ಪ್ರಾಡಕ್ಟ್ಸ್,  ತನ್ನ ಉತ್ಪನ್ನಗಳ ಬೆಲೆಯನ್ನು ಶೇ.5ರಿಂದ ಶೇ.10ರವರೆಗೆ ಏರಿಕೆ ಮಾಡಿದ್ದು,  ಬೆಲೆ ಏರಿಕೆಯ ಸೀಸನ್ ನಲ್ಲಿ ಇದೀಗ ಪಾರ್ಲೆ ಉತ್ಪನ್ನಗಳ ಬೆಲೆ ಕೂಡ ಏರಿಕೆಯಾಗಿದೆ.

ಬಿಸ್ಕೇಟ್ ತಯಾರಿಕೆಗೆ ಬೇಕಾಗಿರುವ ಸಕ್ಕರೆ, ಗೋಧಿ,  ಖಾದ್ಯ ತೈಲದ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ  ಉತ್ಪನ್ನಗಳ ಬೆಲೆ ಏರಿಕೆ ಮಾಡಿರುವುದಾಗಿ ಪಾರ್ಲೆ ಕಂಪೆನಿ ಹೇಳಿಕೊಂಡಿದೆ.

ತನ್ನ ಉತ್ಪನ್ನಗಳಾದ ಪಾರ್ಲೆ—ಜಿ, ಹೈಡ್ ಆ್ಯಂಡ್ ಸೀಕ್, ಕ್ರ್ಯಾಕ್ ಜಾಕ್ ನಂತಹ ಬಿಸ್ಕೇಟ್ ಗಳಲ್ಲಿ ಶೇ.5ರಿಂದ ಶೇ.10ರಷ್ಟು ಹಾಗೂ ರಸ್ಕ್, ಕೇಕ್ ಗಳ ಬೆಲೆಯಲ್ಲಿ ಶೇ.7ರಿಂದ ಶೇ.8ರಷ್ಟು ಹೆಚ್ಚಳ ಮಾಡಲಾಗಿದೆ.

ಪಾರ್ಲೆ—ಜಿ ಬೆಲೆಯು ಗರಿಷ್ಠ ಶೇ.7ರವರೆಗೆ ಹೆಚ್ಚಳವಾಗಿದೆ.  20ಕ್ಕಿಂತ ಹೆಚ್ಚಿನ ಬೆಲೆಯ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಅದಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳ ತೂಕವನ್ನು ಕಡಿಮೆ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೇರಳದಲ್ಲಿ ಬಿಜೆಪಿ ತಳವೂರಲು ಅವಕಾಶ ಕೊಡುವುದಿಲ್ಲ | ಶೈಲಜಾ ಟೀಚರ್

ಆಟೋ ತಡೆದು ಸಹೋದರರ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಬಡ ಹೆಣ್ಣು ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಲೆ: ಮೌನಕ್ಕೆ ಶರಣಾದ ಮಂಗಳೂರಿನ ಸಂಘಟನೆಗಳು

ಪೊಲೀಸ್ ಠಾಣೆಯಿಂದ ಮನೆಗೆ ಬಂದ ಯುವತಿ ಆತ್ಮಹತ್ಯೆಗೆ ಶರಣು | ಪೊಲೀಸ್ ಠಾಣೆಯಲ್ಲಿ ನಡೆದದ್ದೇನು?

ದುನಿಯಾ ವಿಜಯ್ ಮದುವೆಗೆ ಬಾರದಿದ್ದರೆ, ತಾಳಿಕಟ್ಟಿಸಿಕೊಳ್ಳುವುದಿಲ್ಲ: ಹಠ ಹಿಡಿದ ಯುವತಿ!

ಇತ್ತೀಚಿನ ಸುದ್ದಿ